Breaking
4 Feb 2026, Wed

ನ.15ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳೂ ಮೇಳಗಳ ಭವ್ಯ ಮೆರವಣಿಗೆ

ಬಜಪೆ : ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳೂ ಮೇಳಗಳ ಪ್ರಾರಂಭೋತ್ಸವವು ನ. 16 ರಿಂದ ನಡೆಯಲಿದ್ದು, ಈ ಪ್ರಯುಕ್ತ ನ. 15ರಂದು ಏಳೂ ಮೇಳಗಳ ದೇವರ ಭವ್ಯ ಮೆರವಣಿಗೆಯು ಬಜಪೆಯಿಂದ ಕಟೀಲಿನ ವರೆಗೆ ನಡೆಯಲಿದೆ.

ಬಜಪೆ ಶಾಂತಿ ಮಿಲ್‌ನ ವಠಾರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಮಾತನಾಡಿದ ಪ್ರಧಾನ ಅರ್ಚಕ ಶ್ರೀ ಹರಿನಾರಾಯಣ ದಾಸ ಆಸ್ರಣ್ಣ ಅವರು , ಕಟೀಲು ದೇವರ ಒಪ್ಪಿಗೆಯಂತೆ 7ನೇ ಮೇಳ ಈ ಬಾರಿ ಹೊರಡಲಿದೆ ಎಂದರು.

ನ. 15ರಂದು ಬಜಪೆ ಶಾರದಾ ಪೀಠದಿಂದ ವೈಭವದ ಮೆರವಣಿಗೆ ನಡೆಯಲಿದೆ. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಮೆರವಣಿಗೆ ಉದ್ಘಾಟಿಸುವರು. ಮಾನವ ಹಕ್ಕು ಆಯೋಗದ ಅಧ್ಯಕ್ಷ ಶ್ಯಾಮ್ ಭಟ್, ಶಾಸಕರು, ಮಾಜಿ ಶಾಸಕರು ಸೇರಿ ಪ್ರಾರ್ಥನೆ ಮಾಡಿ ದೀಪ ಬೆಳಗಿಸುವರು ಎಂದು ಮಾಹಿತಿಯನ್ನು ನೀಡಿದರು.

Leave a Reply

Your email address will not be published. Required fields are marked *