ಕಾಸರಗೋಡು: ಕಾರಿಗೆ ಬೆಂಕಿ ತಗುಲಿದ ಪರಿಣಾಮ ತೀವ್ರ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಮಲಪ್ಪುರಂನಲ್ಲಿ ನಡೆದಿದೆ.
ಮೃತರನ್ನು ಚೆಂಜಿಪಾಲಂನ ಚೆನಕ್ಕಲಂಗಡಿ ಪಳ್ಳಿಪಾಡಿ ನಿವಾಸಿ ಆದಿಲ್ ಆರಿಫ್ ಖಾನ್ (29) ಎಂದು ಗುರುತಿಸಲಾಗಿದೆ.

ಅ. 20 ರ ಮಧ್ಯರಾತ್ರಿ ಸುಮಾರಿಗೆ ಚೇಲರಿಯಿಂದ ಮನೆಗೆ ಬರುತ್ತಿದ್ದ ಆದಿಲ್ ತನ್ನ ಮನೆಯ ಬಳಿ ಕಾರನ್ನು ನಿಲ್ಲಿಸಿ, ಬಾಗಿಲು ತೆರೆದು ಇಳಿಯುತಿದ್ದಾಗ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಆದಿಲ್ ಅವರು ತಕ್ಷಣ ಕಾರಿನಿಂದ ಇಳಿದರೂ ಬೆಂಕಿಯ ಕೆನ್ನಾಲಿಗೆಯಿಂದ ಅವರಿಗೆ ತೀವ್ರ ಗಾಯವಾಗಿತ್ತು.

ತಕ್ಷಣ ಅವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಕೋಝಿಕ್ಕೋಡ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ, ಎರಡು ದಿನಗಳ ಹಿಂದೆ ತಜ್ಞ ಚಿಕಿತ್ಸೆಗಾಗಿ ಅವರನ್ನು ದೆಹಲಿಯ ಏಮ್ಸ್ ಗೆ ಸ್ಥಳಾಂತರಿಸಲಾಯಿತು. ಆದರೆ ಅ.28ರಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.




