Breaking
23 Mar 2026, Mon

ಸುಳ್ಯದ ಕೊಯನಾಡಿನಲ್ಲಿ ಸ್ವಯಂ ಚಾಲಿತ ಬಸ್ ನ ಬಾಗಿಲು ತೆರೆಯದೆ ಸತಾಯಿಸಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕ

ಸುಳ್ಯ: ಬಸ್ಸನ್ನು ನಿಲ್ಲಿಸದೆ ಇನ್ನೆಲ್ಲೋ ನಿಲ್ಲಿಸಿ ಬಳಿಕ ಸ್ವಯಂ ಚಾಲಿತ ಬಾಗಿಲನ್ನು ತೆರೆಯದೆ ಪ್ರಯಾಣಿಕರನ್ನು ಸತಾಯಿಸಿದ ಕೆಎಸ್‌ಆರ್‌ಟಿಸಿ ಬಸ್‌ನ ಚಾಲಕನೊಬ್ಬನನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಶಿಕ್ಷೆಯ ರೂಪದಲ್ಲಿ ಆ ಬಸ್‌ನಿಂದ ಇಳಿಸಿ ಇನ್ನೊಂದು ಬಸ್ ಗೆ ನಿಯೋಜಿಸಿದ ಘಟನೆ ಸುಳ್ಯದಲ್ಲಿ ಅ.26 ರಂದು ನಡೆದಿದೆ.

ಸ್ವಯಂ ಚಾಲಿತ ಬಾಗಿಲನ್ನು ಹೊಂದಿರುವ ಸುಳ್ಯ-ಕೊಯನಾಡು ನಡುವಣ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್ ಚಾಲಕರಾಗಿರುವ ಗಫೂರ್ ಎಂಬವರ ಮೇಲೆ ಪ್ರಯಾಣಿಕರನ್ನು ಸತಾಯಿಸಿದ ಆರೋಪ ಕೇಳಿಬಂದಿದೆ.

ರವಿವಾರ ಕೊಯನಾಡಿನಿಂದ ಸುಳ್ಯಕ್ಕೆ ಬಸ್ ಬರುತ್ತಿದ್ದಾಗ ಚಾಲಕ ತನ್ನ ಚಾಳಿಯನ್ನು ಪುನರಾವರ್ತಿಸಿದ್ದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಕುರಿತು ತಕ್ಷಣ ನಿಗಮದ ಪುತ್ತೂರು ಹಾಗೂ ಸುಳ್ಯದ ಅಧಿಕಾರಿಗಳಿಗೆ ಪ್ರಯಾಣಿಕರು ದೂರು ನೀಡಿದರು. ಇದಕ್ಕೆ ಸ್ಪಂದಿಸಿರುವ ಇಲಾಖಾಧಿಕಾರಿಗಳು ಚಾಲಕನನ್ನು ಆ ಬಸ್‌ನಿಂದ ಇಳಿಸಿ ಬೇರೆ ಮಾರ್ಗದ ಬಸ್‌ಗೆ ನಿಯೋಜನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *