ಮಂಗಳೂರು : ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಮೂಲ್ಕಿ ಬಿಲ್ಲವ ಭವನದಲ್ಲಿ ಅ. 26ರಂದು ನಡೆಯಿತು.

ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ ಇದರ ಅಧ್ಯಕ್ಷರಾಗಿ ಭಾರತ್ ಬ್ಯಾಂಕ್ ಅಧ್ಯಕ್ಷರಾಗಿರುವ ಸೂರ್ಯಕಾಂತ್ ಜೆ. ಸುವರ್ಣ ಹಾಗೂ ಉಪಾಧ್ಯಕ್ಷರಾಗಿ ಕಾರ್ಕಳದ ಪ್ರಭಾಕರ್ ಬಂಗೇರ ಅವರು ಆಯ್ಕೆಯಾಗಿದ್ದಾರೆ.

ಪ್ರಭಾಕರ್ ಬಂಗೇರ ಅವರು ಕಾರ್ಕಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾಗಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಸ್ಥಾಪಕ ಜೊತೆ ಕಾರ್ಯದರ್ಶಿಯಾಗಿ ಒಟ್ಟು 28 ವರ್ಷಗಳ ಕಾಲ ಬಿಲ್ಲವ ಸಮಾಜದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.



