Breaking
19 Sep 2026, Sat

ಸುರತ್ಕಲ್ ನಲ್ಲಿ ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿ ಬಂಧನ

ಮಂಗಳೂರು : ಸುರತ್ಕಲ್ ನಲ್ಲಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಮುಖ ಆರೋಪಿಯನ್ನು ಸುರತ್ಕಲ್ ಪೊಲೀಸರು ಅ.25 ರಂದು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ರೌಡಿಶೀಟರ್ ಗುರುರಾಜ್ ಆಚಾರಿ ಎಂದು ಗುರುತಿಸಲಾಗಿದೆ.

ಅ.24 ರಂದು ಆರೋಪಿಗಳಿಗೆ ಆಶ್ರಯ ನೀಡಿದ ಕುಳಾಯಿ ಹೊನ್ನ ಕಟ್ಟೆ ನಿವಾಸಿ ಅರುಣ್ ಶೆಟ್ಟಿ ಹಾಗೂ ಸುಶಾಂತ್ ಯಾನೆ ಕಡವಿ, ಕೆ.ವಿ. ಅಲೆಕ್ಸ್, ನಿತಿನ್ ಅವರನ್ನು ಬಂಧಿಸಲಾಗಿತ್ತು . ಪ್ರಕರಣದ ಪ್ರಮುಖ ಆರೋಪಿ ಗುರುರಾಜ್ ಆಚಾರಿ ಮತ್ತು ಅಶೋಕ್ ತಲೆ ಮರೆಸಿಕೊಂಡಿದ್ದರು. ಸದ್ಯ ಗುರುರಾಜ್ ನನ್ನು ಬಂಧಿಸಿರುವ ಪೊಲೀಸರು ತಲೆ ಮರೆಸಿಕೊಂಡಿರುವ ಅಶೋಕ್ ಗಾಗಿ ಬಲೆ ಬೀಸಿದ್ದಾರೆ.

ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *