Breaking
25 Sep 2026, Fri

ಒಡಿಶಾದಲ್ಲಿ ಯುವಕನ ಜೀವ ತೆಗೆದ ರೀಲ್ಸ್

ಒಡಿಶಾ: ರೈಲು ಬರುತ್ತಿದ್ದ ವೇಳೆ ಹಳಿಯ ಪಕ್ಕದಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದ ಯುವಕನಿಗೆ ರೈಲು ಢಿಕ್ಕಿ ಹೊಡೆದು ಯುವಕ ಸಾವನ್ನಪ್ಪಿರುವ ಘಟನೆ ಒಡಿಶಾದ ಪುರಿಯಲ್ಲಿ ಅ.21 ನಡೆದಿದೆ.

ಮಂಗಳಘಾಟ್‌ನ ನಿವಾಸಿ ವಿಶ್ವಜೀತ್ ಸಾಹು (15) ಮೃತ ಯುವಕನಾಗಿದ್ದಾನೆ.

ಮಂಗಳವಾರ ತನ್ನ ತಾಯಿ ಜೊತೆ ದಕ್ಷಿಣಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿಶ್ವಜೀತ್ ವಾಪಸ್ಸಾಗುವ ವೇಳೆ ಜನಕ್‌ದೇವ್‌ಪುರ ರೈಲ್ವೆ ನಿಲ್ದಾಣದ ಬಳಿ ರೈಲು ಬರುತ್ತಿರುವುದನ್ನು ನೋಡಿದ ಸಾಹು ಒಂದು ಸಣ್ಣ ರೀಲ್ಸ್ ಮಾಡುವ ಎಂದು ರೈಲು ಹಳಿ ಬಳಿ ನಿಂತು ದೂರದಲ್ಲಿ ಬರುತ್ತಿದ್ದ ರೈಲಿನ ಚಿತ್ರೀಕರಣ ಮಾಡುತ್ತಿದ್ದ.

ಈ ವೇಳೆ ರೈಲು ಸಾಹುಗೆ ಡಿಕ್ಕಿ ಹೊಡೆದು ಬಿದ್ದಿದ್ದು ಕೈಯಲ್ಲಿದ್ದ ಮೊಬೈಲ್ ದೂರಕ್ಕೆ ಎಸೆಯಲ್ಪಟ್ಟಿದೆ. ಕೂಡಲೇ ಒಡಿಶಾ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬ ಸದಸ್ಯರಿಗೆ ಮೃತದೇಹವನ್ನು ಹಸ್ತಾಂತರ ಮಾಡಿದ್ದಾರೆ.

Leave a Reply

Your email address will not be published. Required fields are marked *