Breaking
23 Mar 2026, Mon

ಉಪ್ಪಿನಂಗಡಿಯಲ್ಲಿ ತಡೆಗೋಡೆಗೆ ಕಾರು ಡಿಕ್ಕಿ, ಯುವಕ ಸಾವು

ಉಪ್ಪಿನಂಗಡಿ: ತಡೆಗೋಡೆಗೆ ಕಾರು ಡಿಕ್ಕಿಯಾಗಿ ಯುವಕ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ ಗುಂಡ್ಯ ಸಮೀಪದ ಅಡ್ಡಹೊಳೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಅ.22 ಮುಂಜಾನೆ ವೇಳೆ ನಡೆದಿದೆ.

ಮೃತನನ್ನು ಹೊಳೆನರಸೀಪುರದ ಸಂಜಯ್ (25) ಎಂದು ಗುರುತಿಸಲಾಗಿದೆ. ಈ ವೇಳೆ ಕಾರಿನಲ್ಲಿ ಇದ್ದ ಅರಕಲಗೂಡಿನ ಸಂದೀಪ್ ಹಾಗೂ ಶೇಷ, ಮಹೇಶ್ ಅಪಾಯದಿಂದ ಪಾರಾಗಿದ್ದಾರೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *