ಕಾಸರಗೋಡು: ನಿವೃತ್ತ ಅಧ್ಯಾಪಕನ ಮನೆಯಿಂದ ಐದೂವರೆ ಪವನ್ ಚಿನ್ನಾಭರಣ ಕಳವುಗೈದ ಪ್ರಕರಣದಲ್ಲಿ ಆರೋಪಿಯನ್ನು ಚಿನ್ನ ಸಹಿತ ಪೊಲೀಸರು ಬಂಧಿಸಿರುವ ಘಟನೆ ಕಾಸರಗೋಡುವಿನ ಕಾಞಂಗಾಡ್‌ವಿನಲ್ಲಿ ನಡೆದಿದೆ.
ನೀಲೇಶ್ವರ ನಿವಾಸಿ ಚಾಲಕ ವಿನು(45) ಬಂಧಿತ ಆರೋಪಿಯಾಗಿದ್ದಾನೆ.

ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಳಿಕ್ಕರ ನಿವಾಸಿ ರವೀಂದ್ರ ಮಾಸ್ತರ್ ಅವರ ಮನೆಯಲ್ಲಿ ಈ ಕಳವು ಪ್ರಕರಣ ನಡೆದಿತ್ತು. ಅಕ್ಟೋಬರ್ 17 ರಿಂದ 21 ರ ಮಧೈ ರವೀಂದ್ರನ್ ಮಾಸ್ತರ ಮನೆಯಲ್ಲಿ ಸೂಟ್ ಕೇಸಿನಲ್ಲಿ ಇಡಲಾಗಿದ್ದ 3 ಬಳೆ, 1 ಮಾಲೆ ಸಹಿತ ಐದೂವರೆ ಪವನ್ ಚಿನ್ನ ಭರಣ ಕಳವು ಗೈಯ್ಯಲಾಗಿತ್ತು.

ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು, ರವೀಂದ್ರನ್ ಮಾಸ್ತರರ ವಾಹನದ ಚಾಲಕ ವಿನು ಮೇಲೆ ನಿಗಾ ಇಟ್ಟರು. ವಿನು ಆಡಂಬರ ಜೀವನ ನಡೆಸುತ್ತಿರುವುದನ್ನು ಕಂಡು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿದ್ದು ರಿಮಾಂಡ್ ವಿಧಿಸಲಾಗಿದೆ




