Breaking
25 Sep 2026, Fri

ವಸತಿಗೃಹಕ್ಕೆ ಕರೆತಂದು ಯುವತಿಯ ಕೊಲೆಗೈದವ ಅರೆಸ್ಟ್

ಕೇರಳ: ಯುವತಿಯನ್ನು ಪತ್ನಿ ಎಂದು ಹೇಳಿ ವಸತಿಗೃಹಕ್ಕೆ ಕೊಂಡೊಯ್ದು ಕೋಣೆ ಪಡೆದು ಕೊಲೆಗೈದ ಘಟನೆ ಕೇರಳದ ಆಟ್ಟಿಂಗಲ್ ಗ್ರೀನ್ ಇನ್ ವಸತಿಗೃಹದಲ್ಲಿ ನಡೆದಿದೆ.

ವಡಗರ ಒಂಜಿಯಂ ನಿವಾಸಿ ಅಸ್ಮಿನ್(38) ಕೊಲೆಗೀಡಾದ ಮಹಿಳೆಯಾಗಿದ್ದಾಳೆ. ಕೊಲೆಗೆ ಸಂಬಂಧಿಸಿ ಇದೇ ವಸತಿಗೃಹದ ರಿಸಪ್ಷನಿಸ್ಟ್ ಆಗಿರುವ ಜೋಬಿ ಜಾರ್ಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಸತಿಗೃದ ಸಿಬಂದಿಯಾಗಿರುವ ಜೋಬಿ ಜಾರ್ಜ್, ಅಸ್ಮಿನ್ ಳನ್ನು ಕರೆತಂದು ಪತ್ನಿ ಎಂದು ಪರಿಚಯಿಸಿ ಬಾಡಿಗೆಗೆ ಕೋಣೆ ಪಡೆದುಕೊಂಡಿದ್ದ ಎನ್ನಲಾಗಿದೆ. ರಾತ್ರಿ 1.30 ಕ್ಕೆ ಮದ್ಯದ ಬಾಟಲಿಯಿಂದ ಚುಚ್ಚಿ ಅಸ್ಮಿನ್ ಳನ್ನು ಕೊಲೆ ಮಾಡಿ ಜೋಬಿ ಪರಾರಿಯಾಗಿದ್ದಾನೆ.

ಬೆಳಗ್ಗೆ ಕೋಣೆಯ ಬಾಗಿಲು ತೆರೆಯದೇ ಇದ್ದಾಗ ಇತರ ಸಿಬ್ಬಂದಿಗಳು ಬಲವಂತವಾಗಿ ಬಾಗಿಲು ತೆರೆದಿದ್ದು ಈ ವೇಳೆ ಅಸ್ಮಿನ್ ಹೆಣವಾಗಿರುವುದು ಕಂಡು ಬಂದಿದೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಆಗಮಿಸಿ ವಸತಿಗೃಹದ ಸಿಸಿ ಕ್ಯಾಮರ ಪರಿಶೀಲಿಸಿದಾಗ ಜೋಬಿ ಜಾರ್ಜ್ ಪರಾರಿಯಾಗುತ್ತಿರುವ ದೃಶ್ಯ ಕಂಡು ಬಂತು. ಅದರಂತೆ ಆತನನ್ನು ಕೋಜಿಕ್ಕೋಡು ಬಳಿಯಿಂದ ಬಂಧಿಸಲಾಗಿದ್ದು, ಕೊಲೆ ನಡೆಸಲು ಕಾರಣವೇನು ಎಂದು ತಿಳಿದುಬಂದಿಲ್ಲ

Leave a Reply

Your email address will not be published. Required fields are marked *