Breaking
24 Mar 2026, Tue

ಹಿಂದೂ ಯುವತಿಗೆ ಮುಸ್ಲಿಂ ಯುವಕನಿಂದ ಲವ್, ಸೆಕ್ಸ್, ದೋಖಾ ಆರೋಪ, ಪ್ರಕರಣ ದಾಖಲು

ಬೆಂಗಳೂರು : ಹಿಂದೂ ಯುವತಿಯೊಬ್ಬಳಿಗೆ ಮುಸ್ಲಿಂ ಯುವಕ ಲವ್ ಸೆಕ್ಸ್ ದೋಖಾ ಮಾಡಿರುವ ಆರೋಪ ಕೇಳಿಬಂದಿದ್ದು ಪ್ರಿಯಕರನ ವಿರುದ್ಧ ದೂರು ದಾಖಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಹಮ್ಮದ್ ಇಶಾಕ್ ವಿರುದ್ಧ ಯುವತಿ ಹೆಚ್ ಎಸ್ ಆರ್ ಠಾಣೆಗೆ ದೂರು ನೀಡಿದ್ದಾರೆ. ಆತನಿಗೆ ಈಗ ಬೇರೊಬ್ಬ ಯುವತಿ ಜೊತೆ ನಿಶ್ಚಿತಾರ್ಥ ನಡೆದಿದ್ದು, ಇದೀಗ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಇಶಾಕ್ ನನ್ನು ದೂರುದಾರೆ ಯುವತಿ ಪ್ರೀತಿ ಮಾಡುತ್ತಿದ್ದಳು ಎನ್ನಲಾಗಿದೆ.

ಆ ಯುವತಿಯನ್ನು ಫುಸಲಾಯಿಸಿ ಇಶಾಕ್ ಲಾಡ್ಜ್ ಗೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ನಡೆಸಿದ್ದಾನೆ ಅನ್ನುವ ಆರೋಪ ಕೇಳಿ ಬಂದಿದೆ. ಬಳಿಕ ಯುವತಿ ಮದುವೆಯಾಗುವಂತೆ ಕೇಳಿದ್ದಾಳೆ. ಆದರೆ ಆತ ಒಪ್ಪದೇ ನೆಪ ಹೇಳಿ ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ.

ನಿನ್ನನ್ನು ಮದುವೆ ಆಗಬೇಕೆಂದರೆ ನೀನು ಮತಾಂತರವಾಗಬೇಕು ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

Leave a Reply

Your email address will not be published. Required fields are marked *