Breaking
10 May 2026, Sun

ಮೂಡುಬಿದಿರೆಯಲ್ಲಿ ಬಾವಿಗೆ ಬಿದ್ದು ಯುವಕ ಸಾವು

ಮೂಡುಬಿದಿರೆ: ಯುವಕನೊಬ್ಬ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮೂಡುಬಿದಿರೆಯ ನೆಲ್ಲಿಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಂಟ್ರಾಡಿ ಕೊಂಬೆಟ್ಟುವಿನಲ್ಲಿ ನಡೆದಿದೆ.

ಮೃತರನ್ನು ಒಂಬೆಟ್ಟು ನಿವಾಸಿ ರಾಜೇಶ್ ಎಂದು ಗುರುತಿಸಲಾಗಿದೆ.

ಮಂಗಳವಾರ ಬೆಳಗ್ಗೆ ರಾಜೇಶ್ ಅವರು ಟ್ರಾಕ್ಟರ್ ತೊಳೆಯಲು ಚಲಾಯಿಸುತ್ತಿದ್ದಾಗ, ಅದು ರಿವರ್ಸ್ ಹೋಗಿ ಬಾವಿಯ ಕಡೆಗೆ ಚಲಿಸಲಾರಂಭಿಸಿತು.ಟ್ರಾಕ್ಟರ್ ಬಾವಿಗೆ ಡಿಕ್ಕಿ ಹೊಡೆದು ಬಾವಿಗೆ ಬಿದ್ದಿದ್ದು ಅದರಲ್ಲಿದ್ದ ರಾಜೇಶ್ ಪ್ರಾಣ ಕಳೆದುಕೊಂಡಿದ್ದಾರೆ.

ರಾಜೇಶ್ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *