ಬಂಟ್ವಾಳ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್ ಪಿ ವೈ ಎಸ್ ಎಸ್) ಕರ್ನಾಟಕ ವತಿಯಿಂದ ಪೊಳಲಿ ನಗರದ ಗಂಜಿಮಠ ಉಳಿಪ್ಪಾಡಿ ಗುತ್ತು ಒಡ್ಡೂರು ಫಾರ್ಮ್ಸ್ ಗೋಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾಮೂಹಿಕ ಗೋ ಪೂಜೆ, ಕರ್ಣ ವೇಧ ಮತ್ತು ಮೂಗುತಿ ಧಾರಣೆ ಹಾಗೂ ಸಾಮೂಹಿಕ ಯೋಗಭ್ಯಾಸ ಕಾರ್ಯಕ್ರಮವು ಅ.19 ರಂದು ಬ್ರಾಹ್ಮಿ ಮುಹೂರ್ತದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನಗರದ ಸಂಚಾಲಕರು ಜನಾರ್ಧನ, ಭರತ್ ಮಟ್ಟಿ, ದೇವದಾಸ್ ಕೊಳತ್ತಾಮಜಲು, ಸುಜಾತಾ ಕುಕ್ಕಿಪಾಡಿ, ಪುರೋಹಿತರು ದೀಪಕ್ ಶರ್ಮ ದೀಪ ಬೆಳಗಿಸಿ ಚಾಲನೆ ನೀಡಿದರು. ಈ ವೇಳೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಾಮೂಹಿಕ ಯೋಗಭ್ಯಾಸ, ಗಣಪತಿ ನಮಸ್ಕಾರ, ವಿಷ್ಣು ನಮಸ್ಕಾರವನ್ನು ಯೋಗ ಶಿಕ್ಷಕರಾದ ನಯನ ಬೆಂಜಾನಪದವು, ಶೋಭಾ ಮಟ್ಟಿ, ಕುಮಾರ ಕೈಕಂಬ ನಡೆಸಿಕೊಟ್ಟರು ಹಾಗೂ ಪ್ರಾತ್ಯಕ್ಷಿತೆಯನ್ನು ಭವಿನ್, ದೇವದಾಸ್, ಶಶಿಕಲಾ, ವನಿತಾ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಅರುಣ್ ಆರಂಬೊಡಿಯವರು ದೀಪಾವಳಿ ಹಾಗೂ ಗೋ ಪೂಜೆಯ ಮಹತ್ವ ಹಾಗೂ ಗೋವು ಸಂರಕ್ಷಣೆ ಯಿಂದ ನಮಗೆ ಮತ್ತು ಪ್ರಕೃತಿಗೆ ಆಗುವ ಪ್ರಯೋಜನಗಳನ್ನು ತಿಳಿಸಿದರು.

ಪುರೋಹಿತರಾದ ದೀಪಕ್ ಶರ್ಮರವರ ನೇತೃತ್ವದಲ್ಲಿ ಲಕ್ಶ್ಮೀ ಪೂಜೆ, ಕಲಶ ಪೂಜೆ ಬಳಿಕ ಗೋವುಗಳ ಪೂಜೆಯನ್ನು ಬಾಲಕೃಷ್ಣ ಮತ್ತು ಪದ್ಮಾವತಿ ದಂಪತಿಗಳ ಸಹಕಾರದಿಂದ ನೆರವೇರಿಸಿದರು. ವಿಶ್ವಕರ್ಮ ಸೀತಾರಾಮ ಆಚಾರ್ಯರವರು ಕರ್ಣವೇದನ ಮತ್ತು ಮೂಗುತಿ ಧಾರಣೆ ನಡೆಸಿಕೊಟ್ಟರು ಮತ್ತು ಅಗ್ನಿಹೋತ್ರ ಕೃಷ್ಣಪ್ಪ ಆರಂಬೊಡಿ ದಂಪತಿಗಳು ನೆರವೇರಿಸಿದರು.

ನಗರದಿಂದ ಸುಮಾರು 250 ಯೋಗಬಂಧುಗಳು ಪೊಳಲಿ, ಕೈಕಂಬ, ಕಾಜಿಲ, ಬೆಂಜಾನಪದವು, ಮಟ್ಟಿ, ಅಶ್ವಥಪುರ, ಮಿಜಾರು, ಕುಕ್ಕಿಪಾಡಿ, ಸಿದ್ದಕಟ್ಟೆ, ರಾಯಿ, ಹನ್ನೆರಡು ಕವಲು, ಆರಂಬೊಡಿ, ಅರಳ, ಸೊರ್ನಾಡು ಶಾಖೆಗಳಿಂದ ಜೋಡಿಸಿಕೊಂಡಿದ್ದರು. ಜಿಲ್ಲಾ ಪ್ರಮುಖರಾದ ಅನಿತಾಪ್ರಸನ್ನ, ಲೋಕೇಶ್ ಪೊಳಲಿ, ಶಿವಪ್ರಸಾದ್ ಪೊಳಲಿ, ಪ್ರಶಾಂತ್ ಕುಕ್ಕಟ್ಟೆ,ನಿತಿನ್ ಅರಳ,ಕೇಶವ ಕಾವೇರಿ, ಮೋಹನದಾಸ್ ಪೊಳಲಿ, ಸುರೇಂದ್ರ ಸಿದ್ದಕಟ್ಟೆ, ಸ್ಮಿತಾ ಕಡೆಗುಂಡ್ಯ, ಶಶಿಕಲಾ ಕುಕ್ಕಿಪಾಡಿ,ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ಭರತ್ ವಂದಿಸಿದರು ಹಾಗೂ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು..



