Breaking
10 May 2026, Sun

ಸಿದ್ದಕಟ್ಟೆ-ಕೊಡಂಗೆ ಕಂಬಳ ಕರೆಯಲ್ಲಿ ದೀಪಾವಳಿ ಆಚರಣೆ

ವೀರ – ವಿಕ್ರಮ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ : ವೀರ-ವಿಕ್ರಮ ಕಂಬಳ ಕರೆ ಸಿದ್ಧಕಟ್ಟೆ ಕೊಡಂಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಂಬಳದ ಕರೆಗಳಿಗೆ ವಿಶೇಷವಾಗಿ ದೀಪವನ್ನು ಹಚ್ಚಿ ದೀಪಾವಳಿಯನ್ನು ಆಚರಿಸಲಾಯಿತು.

ನವೆಂಬರ್ 22 ರಂದು ಈ ವರ್ಷದ ಕಂಬಳ ಕೂಟವು ನಡೆಯಲಿದ್ದು ಕಂಬಳದ ಪೋಷಕರು ಉದ್ಯಮಿಯಾದ ರಾಧಾಕೃಷ್ಣ ಭಟ್ ಹೊಕ್ಕಾಡಿ ಗೋಳಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಕೊಡಂಗೆ ಕಂಬಳ ಸಮಿತಿ ಅಧ್ಯಕ್ಷರಾದ ಸಂದೀಪ್ ಶೆಟ್ಟಿ, ಪದಾಧಿಕಾರಿಗಳಾದ ಶಶಿಧರ ಶೆಟ್ಟಿ ಕಲ್ಲಾಪು, ರಾಘವೇಂದ್ರ ಭಟ್, ವಸಂತ ಶೆಟ್ಟಿ ಕೇದಗೆ, ಸಂದೇಶ್ ಶೆಟ್ಟಿ ಪೊಡುಂಬ, ಕಿರಣ್ ಕುಮಾರ್ ಮಂಜಲ, ಉಮೇಶ್ ಶೆಟ್ಟಿ ಕೊನೆರಬೆಟ್ಟು, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಅಜಿತ್ ಕುಮಾರ್ ಜೈನ್,ಓಬಯ್ಯ ಪೂಜಾರಿ, ಗಣೇಶ್ ಶೆಟ್ಟಿ ಗೋಳಿದೊಟ್ಟು, ಪ್ರಭಾಕರ ಪ್ರಭು, ಸುರೇಶ್ ಶೆಟ್ಟಿ ಕುತ್ಲೋಡಿ, ಜನಾರ್ದನ ತಿಮರಡ್ಡ, ರಾಜೇಶ್ ಕೊನೆರಬೆಟ್ಟು , ಗಿರೀಶ್ ಕರ್ಪೆ ಪುಷ್ಪರಾಜ ಶೆಟ್ಟಿ ಹೊಕ್ಕಾಡಿಗೋಳಿ, ರಘುರಾಮ್ ಶೆಟ್ಟಿ ದೇವಸ , ಹರೀಶ್ ಶೆಟ್ಟಿ ರವಿ ಶೆಟ್ಟಿ, ಪುಷ್ಪರಾಜ್ ಸಿದ್ದಕಟ್ಟೆ, ಉಮಾನಾಥ್ ಆರ್ಕುಡೇಲು, ಜಗದೀಶ್ ಕೊಂಡಬೆಟ್ಟು, ನಿತ್ಯಾನಂದ ಶೆಟ್ಟಿ ಗುಬ್ಬಚ್ಚಿ ಗೂಡು, ಭಾಸ್ಕರ್ ಪೈ, ದೀಪಕ್ ರೈ, ಪ್ರವೀಣ್ ಹಲಾಯಿ, ಯಶೋಧ ಹಲಾಯಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *