Breaking
25 Sep 2026, Fri

ಕಡಬದ ಕುಂಡಡ್ಕದಲ್ಲಿ ಬಡಿದ ಸಿಡಿಲು,ಮೂವರಿಗೆ ಗಂಭೀರ ಗಾಯ

ಕಡಬ: ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ಸಾರಕರೆ ಬಳಿ ಶುಕ್ರವಾರ ರಾತ್ರಿ ಸಿಡಿಲು ಬಡಿದು ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಅ.17 ರಂದು ರಾತ್ರಿ ನಡೆದಿದೆ.

ಸಾರಕರೆ ನಿವಾಸಿ ಭಾರತಿ, ಪುತ್ರಿಯರಾದ ಸುಶ್ಮಿತಾ, ಲತಾಶ್ರೀ ಎಂಬವರು ಗಾಯಗೊಂಡಿದ್ದಾರೆ.

ಇಬ್ಬರಿಗೆ ಹೆಚ್ಚಿನ ಪ್ರಮಾಣದ ಗಾಯ ಉಂಟಾಗಿದ್ದು ತಕ್ಷಣ ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಓರ್ವಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *