Breaking
25 Sep 2026, Fri

ಮಣ್ಣಗುಂಡಿ ಪರಿಸರದಲ್ಲಿ ರೈತರ ತೋಟಗಳಿಗೆ ಮತ್ತೆ ಲಗ್ಗೆ ಇಟ್ಟ ಕಾಡಾನೆ, ಭಾರೀ ಹಾನಿ

ಕಡಬ: ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಪರಿಸರದಲ್ಲಿ ರೈತರ ತೋಟಗಳಿಗೆ ಕಾಡಾನೆ ಮತ್ತೆ ಲಗ್ಗೆ ಇಟ್ಟಿದ್ದು, ಭಾರೀ ಹಾನಿ ಮಾಡಿದೆ.

ಮಣ್ಣಗುಂಡಿ ನಿವಾಸಿಯಾಗಿರುವ ರಾಜೀವಿ ಅವರ ಮನೆಯ ಬಳಿಯಲ್ಲಿದ್ದ ತೆಂಗಿನಮರ, ಅಡಿಕೆಮರ, ಬಾಳೆಗಿಡ ಸೇರಿದಂತೆ ಹಲವು ಬೆಳೆಗಳನ್ನು ಕಾಡಾನೆ ನಾಶಮಾಡಿದೆ ಎಂದು ತಿಳಿದು ಬಂದಿದೆ. ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿದ ಕಾಡಾನೆ ಮನೆ ಸಮೀಪಕ್ಕೆ ಬಂದಿರುವುದರಿಂದ ಮನೆಯವರು ಹಾಗೂ ನೆರೆಹೊರೆಯವರು ಭಯಗೊಂಡಿದ್ದಾರೆ.

ಸಮಸ್ಯೆ ಪರಿಹಾರ ಮಾಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಬಳಿ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *