Breaking
6 May 2026, Wed

3ನೇ ವರ್ಷದ ಸಂಭ್ರಮದಲ್ಲಿ ಬಡ ಕುಟುಂಬವೊಂದಕ್ಕೆ ಆಸರೆಯಾಗಲು ಹೊರಟ ಉಪ್ಪಿನಂಗಡಿ ತಿರುಮಲ ಪಟಾಕಿ ಮಳಿಗೆ

ಉಪ್ಪಿನಂಗಡಿ : ಯಶಸ್ವಿ 3 ನೇ ವರ್ಷದ ಸಂಭ್ರಮದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ತಿರುಮಲ ಪಟಾಕಿ ಮಳಿಗೆ ಎಲ್ಲರೂ ಆಸರೆಯಾಗಬೇಕಾಗಿದೆ.

ಹೌದು ಈ ಬಾರಿ ತಿರುಮಲ ಪಟಾಕಿಯ ಮಳಿಗೆಯು ಗ್ರಾಹಕರಿಗೆ ಪಟಾಕಿ ಸೇವೆಯನ್ನು ನೀಡುವುದರ ಜೊತೆ ಜೊತೆಗೆ ಸಮಾಜ ಸೇವೆಯನ್ನು ಮಾಡಲು ಮುಂದಾಗಿದೆ.

ಇಳಂತಿಲ ಗ್ರಾಮದ ನೇಜಿಕಾರು ನಿವಾಸಿಯಾಗಿರುವ ಸೀನ ಶೆಟ್ಟಿ ಹುಟ್ಟು ದಿವ್ಯಾಂಗ ಚೇತನರಾಗಿರುವ ತನ್ನ ಇಬ್ಬರು ಸಹೋದರರೊಂದಿಗೆ ಕೇವಲ ಸರ್ಕಾರ ನೀಡುವ ಅಂಗಲವಿಕಲರ ಸಹಾಯಧನದಿಂದ ಜೀವನ ನಡೆಸುತಿದ್ದರು.

ವಿಧಿಯಾಟ ಎಂಬಂತೆ ಕಾನೂನಿನ ಕಟ್ಟಲೆಯಲ್ಲಿ ಸೀನ ಶೆಟ್ಟಿಯವರು ತನಗೆ ಆಸರೆಯಾಗಿದ್ದ ಮನೆಯನ್ನು ಕಳೆದುಕೊಂಡಿದ್ದಾರೆ. ಇದನ್ನು ಮನಗಂಡು ತಿರುಮಲ ಪಟಾಕಿ ಮಳಿಗೆಯೂ ವ್ಯಾಪಾರದಗಳಿಕೆಯಲ್ಲಿ ಉಳಿದ ಒಂದು ಮೊತ್ತವನ್ನು ಈ ಬಡ ಕುಟುಂಬಕ್ಕೆ ನೀಡುವುದೆಂದು ತೀರ್ಮಾನಿಸಿದ್ದಾರೆ.

ದೀಪಾವಳಿಯ ದೀಪದ ಬೆಳಕನ್ನು ನಮ್ಮವರ ಬಾಳಿನಲ್ಲಿ ಬೆಳಕಾಗುವ ಕಾರ್ಯಕ್ಕೆ ನಮ್ಮೊಂದಿಗೆ ಕೈ ಜೋಡಿಸಿ ಎಂದು, ಉಪ್ಪಿನಂಗಡಿ, ಸ್ಟೆಪ್ ಗ್ಯಾಸ್ ಹತ್ತಿರ, ಜ್ಞಾನ ಭಾರತಿ ಶಾಲಾ ಮುಂಭಾಗದ ಬಳಿ ಇರುವ ತಿರುಮಲ ಪಟಾಕಿ ಮಳಿಗೆಯ ಮಾಲಕರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *