ಬೆಳ್ತಂಗಡಿ: ತಾಲೂಕಿನ ಹುಣ್ಸೆಕಟ್ಟೆ, ಕಳಿಯ ಹಾಗೂ ಕೊಯ್ಯೂರು ಗ್ರಾಮಗಳ ಸಾರ್ವಜನಿಕರ/ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳನ್ನು ಕೆ.ಎಸ್.ಆರ್.ಟಿ.ಸಿ ನಿಗಮದ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ ಅವಶ್ಯ ಸಮಯಕ್ಕೆ ಬಸ್ ಗಳ ರೂಟ್ ಸೇವೆಯನ್ನು ಪ್ರಾರಂಭಿಸುವ ಕುರಿತು ಸೂಚನೆ ನೀಡಲಾಗಿತ್ತು.

ಈ ನಿಟ್ಟನಲ್ಲಿ ಗುರುವಾರದಿಂದ ಹುಣ್ಸೆಕಟ್ಟೆಯಿಂದ ಗೇರುಕಟ್ಟೆ ಮಾರ್ಗವಾಗಿ ಪರಪ್ಪು ಕೊಯ್ಯೂರು ಬಸ್ ಸಂಚಾರ ಆರಂಭಗೊಂಡಿದೆ.
ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಬೇಡಿಕೆಯನ್ನು ಈಡೇರಿಸಿದ ತಾಲೂಕಿನ ಜನಪ್ರಿಯ ಶಾಸಕರಾದ ಹರೀಶ್ ಪೂಂಜರವರಿಗೆ ಆ ಭಾಗದ ನಾಗರಿಕರು ಅಭಿನಂದನೆ ಸಲ್ಲಿಸಿದರು.




