ಮಂಗಳೂರು: ಕಾಂತಾರಾದ ಬಳಿಕ ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದ್ದು, ಚಿತ್ರಮಂದಿರವು ಸಿನಿ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ.

ಈ ಮಧ್ಯೆ ಮಂಗಳೂರು ನಗರದ ಪ್ರಭಾತ್ ಚಿತ್ರಮಂದಿರ ಮುಂದೆ ಕಾಂತಾರ ಚಾಪ್ಟರ್ 1 ರಲ್ಲಿ ನಟಿಸಿರುವ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿಯ ಮೂವತ್ತು ಅಡಿ ಎತ್ತರದ ಕಟೌಟ್ ನಿರ್ಮಾಣ ಮಾಡಲಾಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ರಾಕೇಶ್ ಪೂಜಾರಿಯ ಕಟೌಟ್ ಗೆ ಪುಷ್ಪಾರ್ಚನೆ ಮಾಡಿರುವ ಸ್ನೇಹಿತರು ಆತನ ಮೂರು ವರ್ಷಗಳ ಶ್ರಮವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.




