ಕೇರಳ: ಭಾವೀ ವಧೂ ವರರು ಪ್ರಯಾಣಿಸುತ್ತಿದ್ದ ಬೈಕ್ ಮಗುಚಿ ಬಿದ್ದು ಯುವತಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕೇರಳ ಎರ್ನಾಕುಳಂ ನಲ್ಲಿ ಅ.2 ರಂದು ನಡೆದಿದೆ.
ಮೃತಳನ್ನು ಚಾಲಕುಡಿ ಪೋಟ್ಟ ನಿವಾಸಿ ಸುದೇವ್ ಎಂಬವರ ಪುತ್ರಿ ಅನಘ ಎಂದು ಗುರುತಿಸಲಾಗಿದೆ.

ಬೈಕ್ ಚಲಾಯಿಸುತ್ತಿದ್ದ ಅನಘಳ ಭಾವೀ ಪತಿ ಜಿಷ್ಣು ಗಂಭೀರ ಗಾಯಗೊಂಡು ಆಲುವ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಘ ಮತ್ತು ಜಿಷ್ಣು ಸಂಬಂಧಿಕರಾಗಿದ್ದು ಇವರೀರ್ವರ ಮದುವೆ ನಿಶ್ಚಿತಾರ್ಥ ಈ ಹಿಂದೆಯೇ ನಡೆದಿತ್ತು.

ನಿನ್ನೆ ಬೆಳಗ್ಗೆ ಜಿಷ್ಣು ಮನೆಗೆ ಆಗಮಿಸಿ ಅನಘಳನ್ನು ಬೈಕಿನಲ್ಲಿ ಹತ್ತಿಸಿ ಪೇಟೆಗೆ ಹೋಗಿದ್ದು ಹಿಂತಿರುಗುವಾಗ ಈ ಅವಘಡ ಸಂಭವಿಸಿದೆ.



