ಕಣಿಯೂರು: ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದಲ್ಲಿ ಅ.01ರಂದು ಆಯುಧ ಪೂಜೆಯೂ ವೈಧಿಕ ವಿಧಾನಗಳೊಂದಿಗೆ ನಡೆದಿದೆ.
ಊರ ಭಕ್ತಾಧಿಗಳ, ಕ್ಷೇತ್ರ ಅರ್ಚಕರ, ಆಡಳಿತ ಮಂಡಳಿಯ ಹಾಗೂ ಗಣ್ಯರ ವಾಹನಗಳಿಗೆ ಕ್ಷೇತ್ರದ ಶ್ರೀ ಶ್ರೀ ಮಹಬಲೇಶ್ವರ ಸರಸ್ವತಿ ಸ್ವಾಮೀಜಿಯವರು ಪೂಜೆ ನೆರವೇರಿಸಿದರು.

ಸುಮಾರು 50ಕ್ಕೂ ವಾಹನಗಳಿಗೆ ಪೂಜೆ ನಡೆದಿದ್ದು ಸಂಜೆ 6:30ಕ್ಕೆ ರಕ್ತೇಶ್ವರೀ ಹಾಗೂ ಅನ್ನಪ್ಪ ದೈವಗಳಿಗೆ ವರ್ಷದ ಬಲಿಸೇವೆ ನಡೆದಿದೆ.
ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸೇರಿದಂತೆ ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು.




