Breaking
21 Mar 2026, Sat

ಅ. 5: ಸಜಿಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಳದಲ್ಲಿ ವಿಶೇಷ ಸಭೆ

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ ನಡು ದೇವಳದ ಸಮಗ್ರ ಅಭಿವೃದ್ಧಿಗಾಗಿ ಸಂಕಲ್ಪಿತ ಭೂದಾನ ಸೇವಾ ಕಾಣಿಕೆ ಮತ್ತು ಮುಷ್ಟಿ ಅಕ್ಕಿ ಕಾಣಿಕೆ ಹಾಗೂ ಹೂಮಾಲೆ ಅಲಂಕಾರ ಸೇವೆಗಳ ಬಗ್ಗೆ ಸಜೀಪ ನಡು ಹಾಗೂ ಸಜೀಪ ಪಡು ಗ್ರಾಮಗಳ ಭಗವದ್ಭಕ್ತರ ವಿಶೇಷ ಸಭೆಯು ಅ. 5 ರಂದು ಶ್ರೀ ದೇವಳದ ಆವರಣದಲ್ಲಿ ನಡೆಯಲಿದೆ.

ಶ್ರೀ ದೇವಳದ ಲೆಕ್ಕಪತ್ರಗಳ ನಿರ್ವಹಣೆಯ ಬಗ್ಗೆ ರಚಿಸಲಾದ ಮೊಬೈಲ್ ತಂತ್ರಾಂಶವನ್ನು ಶಾರದಾ ಗಣಪತಿ ವಿದ್ಯಾ ಕೇಂದ್ರ ಪುಣ್ಯಕೋಟಿ ನಗರ ಕೈರಂಗಳ ಸಂಚಾಲಕರಾದ ಟಿ.ಜಿ. ರಾಜಾರಾಮ್ ಭಟ್ ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಜಗನ್ನಾಥ ಚೌಟ ಬದಿ ಗುಡ್ಡೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಕೆ ಸಂಜೀವ ಪೂಜಾರಿ, ಅಧ್ಯಕ್ಷರು ಸಜೀಪ ಮುನ್ನೂರು ಮೂರ್ತೇದಾರರ ಸೇವಾ ಸಹಕಾರಿ ಸಂಘ ನೀ. ಬೋ ಳ್ಳಾಯಿ, ಎo. ಸುಬ್ರಹ್ಮಣ್ಯ ಭಟ್, ಸಜೀಪ ಮಾಗಣೆ ತಂತ್ರಿಗಳು, ಗೋಪಾಲಕೃಷ್ಣ ಭಟ್ ಕಾಕುಂ ಜೆ, ಸಿ.ಇ.ಓ ಮತ್ತು ಎಂ.ಡಿ .ಕಾಕುಂಜೆ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಸೇರಿದಂತೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ .

Leave a Reply

Your email address will not be published. Required fields are marked *