Breaking
22 Mar 2026, Sun

ಸುಳ್ಯದಲ್ಲಿ ಅಂಗಡಿಗೆ ನುಗ್ಗಿದ ಇಕೋ : ಅಂಗಡಿ ಸಿಬ್ಬಂದಿ ಅಪಾಯದಿಂದ ಪಾರು

ಸುಳ್ಯ: ಬೈಕ್ ಅಡ್ಡ ಬಂದ ಪರಿಣಾಮ ಕಾರು ನೇರವಾಗಿ ಟೈಲರ್ ಅಂಗಡಿಗೆ ನುಗ್ಗಿದ ಘಟನೆ ಸುಳ್ಯ ಅಂಬೆಟಡ್ಕ ಎಂಬಲ್ಲಿ ನಡೆದಿದೆ.

ಕೆರ್ಪಳ ಹೇಮನಾಥ್ ಅವರು ಚಲಾಯಿಸುತ್ತಿದ್ದ ಕಾರು ಎನ್ನಲಾಗಿದ್ದು, ಗಾಡಿ ಬಂದ ರಭಸಕ್ಕೆ ಅಂಗಡಿ ಒಳಗಿನ ವಸ್ತುಗಳು, ಟೈಲರ್ ಮಿಷನ್, ವಸ್ತ್ರಗಳು ಸಂಪೂರ್ಣ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಅದೃಷ್ಟವಶಾತ್‌, ಮಧ್ಯಾಹ್ನದ ವೇಳೆ ಅಂಗಡಿಯ ಮಾಲಕಿ ಊಟಕ್ಕೆ ತೆರಳಿದ್ದು, ಸಿಬ್ಬಂದಿ ಅಂಗಡಿಯ ಹಿಂಭಾಗ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ.

Leave a Reply

Your email address will not be published. Required fields are marked *