Breaking
22 Mar 2026, Sun

ಮುಂಬೈ ವಿಮಾನ ನಿಲ್ದಾಣದಲ್ಲಿ ಪೋಕ್ಸೊ ಪ್ರಕರಣದ ಆರೋಪಿ ಅರೆಸ್ಟ್

ಕಾಸರಗೋಡು: ಪೋಕ್ಸೊ ಪ್ರಕರಣದಲ್ಲಿ ವಾರೆಂಟ್ ಆರೋಪಿಯಾಗಿರುವ ವ್ಯಕ್ತಿಯನ್ನು ವಿದೇಶದಿಂದ ಮರಳುವ ವೇಳೆ ಮುಂಬೈ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಟಣಿಗೆ ಬಳಿಯ ಐತ್ತನಡ್ಕ ನಿವಾಸಿ ಮುಹಮ್ಮದಲಿ ಶಿಹಾಬ್(25) ಎಂದು ಗುರುತಿಸಲಾಗಿದೆ.

2022 ನೇ ವರ್ಷದಲ್ಲಿ ದಾಖಲಿಸಲಾದ ಪ್ರಕರಣದಲ್ಲಿ ಮುಹಮ್ಮದಲಿ ಶಿಹಾಬ್ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಆದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *