Breaking
21 Jun 2026, Sun

ತಿರುವಣ್ಣಾಮಲೈ: ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಬಂಧನ

ಚೆನ್ನೈ: ತಮಿಳುನಾಡಿನ ತಿರುವನ್ನಮಲೈನ ಜಿಲ್ಲಾ ಪೂರ್ವ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳು ಆಂಧ್ರಪ್ರದೇಶದ ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಘಟನೆ ನಡೆದಿದೆ.

ಅತ್ಯಾಚಾರವೆಸಗಿದ ಆರೋಪಿಗಳನ್ನು ಸುಂದರ್ ಮತ್ತು ಸುರೇಶ್ ರಾಜ್‌ ಎಂದು ಗುರುತಿಸಲಾಗಿದ್ದು ಇಬ್ಬರನ್ನು ಕರ್ತವ್ಯದಿದಂದ ಅಮಾನತು ಮಾಡಿ ಬಂಧಿಸಿದ್ದಾರೆ.

ಮಾಹಿತಿಯ ಪ್ರಕಾರ ಯುವತಿ ಮತ್ತು ಆಕೆಯ ತಾಯಿ ಆಂಧ್ರಪ್ರದೇಶದಿಂದ ತಿರುವನ್ನಮಲೈಗೆ ಹಣ್ಣುಗಳನ್ನು ಮಾರಾಟ ಮಾಡಲು ಪ್ರಯಾಣಿಸುತ್ತಿದ್ದ ವೇಳೆ ಪೊಲೀಸ್ ಕಾನ್‌ಸ್ಟೇಬಲ್‌ಗಳು ವಾಹನವನ್ನು ತಡೆದು, ತಪಾಸಣೆ ಮಾಡಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿಯ ತಾಯಿಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *