ವಿಟ್ಲ: ಇಂಟರ್ ಲಾಕ್ ಘಟಕದಲ್ಲಿರುವ ಸಿಸಿ ಕ್ಯಾಮರಾಗಳಿಗೆ ಹಾನಿ ಮಾಡಿ, ದೇವರ ಫೋಟೋ ಮತ್ತು ಡಿವಿಆರ್ ಅನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ವಿಟ್ಲದ ಪುಣಚದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಅಪ್ರಾಪ್ತರನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಂಜೆ 6 ಗಂಟೆ ಸುಮಾರಿಗೆ ಆನಂದ ಗೌಡರು ಘಟಕವನ್ನು ಪರಿಶೀಲಿಸಲು ತೆರಳಿದಾಗ, ಘಟಕದ ಬಾಗಿಲನ್ನು ಮುರಿದು ಅಕ್ರಮವಾಗಿ ಪ್ರವೇಶಿಸಿದ್ದು, ಎರಡು ಸಿಸಿ ಕ್ಯಾಮರಗಳನ್ನು ನಾಶಮಾಡಲಾಗಿತ್ತು. ದೇವರ ಫೋಟೋ ಮತ್ತು ಸಿಸಿ ಕ್ಯಾಮರಾದ ಡಿವಿಆರ್ ಗಳನ್ನು ಸುಟ್ಟಿದ್ದಾರೆ.

ಈ ಬಗ್ಗೆ ಇಂಟರ್ ಲಾಕ್ ಘಟಕದ ಮಾಲಕ ಆನಂದ ಗೌಡ ನೀಡಿದ ವಿಟ್ಲ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಿಲಿಸಿಕೊಂಡಿದ್ದರು.
ಸದ್ಯ ಬಾಲಕರನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



