Breaking
25 Sep 2026, Fri

ಮನೆಯಲ್ಲಿ ನವರಾತ್ರಿ ಪೂಜೆ ನಡೆಯುತ್ತಿದ್ದ ಸಂದರ್ಭ ವ್ಯಕ್ತಿ ನೇಣಿಗೆ ಶರಣು

ಕಾರ್ಕಳ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿರುವ ಸಂತೋಷ ಆಚಾರ್ಯ (34) ಎಂದು ಗುರುತಿಸಲಾಗಿದೆ.

ಅ.30 ರಂದು ಮನೆಯಲ್ಲಿ ನವರಾತ್ರಿ ಪೂಜೆ ನಡೆಯುತ್ತಿತ್ತು. ಸಂತೋಷ ಆಚಾರ್ಯ ಮದ್ಯಪಾನ ಮಾಡಿದ್ದರಿಂದ ಅವರ ಬದಲಿಗೆ ಅವರ ಅಣ್ಣನ ಮಗ ದೀಪಕ್ ಪೂಜೆಗೆ ಕುಳಿತಿದ್ದರು. ಪೂಜೆ ಮುಗಿದ ಬಳಿಕ ಸಂಜೆ 5:15 ರ ಸುಮಾರಿಗೆ ಸಂತೋಷ್ ಅವರು ಮನೆಯ ಹಾಲ್‌ನಲ್ಲಿ ನೇಣು ಹಾಕಿಕೊಂಡಿರುವುದಾಗಿ ಕಂಡುಬಂದಿದೆ.

ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *