Breaking
21 Sep 2026, Mon

ಆಂಬುಲೆನ್ಸ್‌ಗೆ ದಾರಿ ಮಾಡಿಕೊಡದ ಕಾರಣ ಕಾರಿಗೆ ರೂ. 6,000 ದಂಡ

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಮಗುವನ್ನು ಆಂಬುಲೆನ್ಸ್‌ ಮೂಲಕ ಕರೆತರುತ್ತಿದ್ದ ವೇಳೆ ಕಾರೊಂದು ದಾರಿ ಮಾಡಿಕೊಡದೆ ಅಡ್ಡಿ ಪಡಿಸಿದರಿಂದ ಕಾರು ಚಾಲಕನಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ.

ಸೆ. 29 ರಂದು ಆಂಬುಲೆನ್ಸ್‌ ಮೂಲಕ ಮಗುವನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಗುಂಡ್ಯ ಬಳಿ ತಲುಪಿದಾಗ, ಮುಂದೆ ತೆರಳುತ್ತಿದ್ದ ಕಾರು ದಾರಿ ಬಿಡದೇ ಅಡ್ಡಿ ಪಡಿಸಿದೆ ಎಂದು ಆಂಬುಲೆನ್ಸ್ ಚಾಲಕ ಅನೀಫ್ ದೂರಿನಲ್ಲಿ ತಿಳಿಸಿದ್ದಾರೆ.

ಆಂಬುಲೆನ್ಸ್ ಚಾಲಕ ಅನೀಫ್ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಕೆಎ-21-C-6687 ನಂಬರಿನ ಕಾರಿಗೆ ಪೊಲೀಸರು ₹6000 ದಂಡ ವಿಧಿಸಿದ್ದಾರೆ.

Leave a Reply

Your email address will not be published. Required fields are marked *