ಪುತ್ತೂರು: ತೋಟದಲ್ಲಿ ಮೇಯಲು ಬಿಟ್ಟ ದನವು ಕಾಣೆಯಾದ ಘಟನೆ ಪಾಣಾಜೆ ಗ್ರಾಮದ ಚಂದ್ರಗಿರಿ ಎಂಬಲ್ಲಿ ನಡೆದಿದೆ.
ಕೃಷಿಕ ಗಣೇಶ್ ಭಟ್ ಎಂಬವರ ತೋಟದಲ್ಲಿ ಮೇಯಲು ಬಿಟ್ಟ ದನವು ಕಾಣೆಯಾಗಿದ್ದು ಎರಡು ದಿನದಿಂದ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಪಾಣಾಜೆಯಲ್ಲಿ ನಿರಂತರ ಅಕ್ರಮ ಗೋ ಸಾಗಟದ ಹಿನ್ನೆಲೆಯಲ್ಲಿ ಪೆರ್ನೆಯಲ್ಲಿ ಒಂದು ವಾರದ ಹಿಂದೆ ನಡೆದಂತೆ ಇಲ್ಲೂ ನಡೆದಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಪೊಲೀಸರು ತಕ್ಷಣ ಆರೋಪಿಗಳನ್ನು ಬಂಧಿಸಬೇಕು.ಇಲ್ಲದಿದ್ದಲ್ಲಿ ಪಾಣಾಜೆಯಲ್ಲಿ ರೈತ ಬಂಧುಗಳು ಮತ್ತು ಗೋ ಪ್ರೇಮಿಗಳ ನೇತೃತ್ವದಲ್ಲಿ ಗೋರಕ್ಷಣೆಗಾಗಿ ಬ್ರಹತ್ ಜನಾಗ್ರಹ ಚಳುವಳಿ ನಡೆಯಲಿದೆ ಎಂದು ಪುತ್ತಿಲ ಪರಿವಾರ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.




