Breaking
20 Sep 2026, Sun

ಕೇರಳದ ಶಾಸ್ತಾಂಕೋಟ್ಟ ಬಳಿ ಸ್ಕೂಟರಿಗೆ ಬಸ್ ಡಿಕ್ಕಿ: ಭಾವಿ ವಧು ಸಾವು

ಕೇರಳ: ಸ್ಕೂಟರಿಗೆ ಬಸ್ಸು ಡಿಕ್ಕಿ ಹೊಡೆದು ಭಾವಿ ವಧು ಮೃತಪಟ್ಟ ಘಟನೆ ತಿರುವನಂತಪುರಂ ನ ಶಾಸ್ತಾಂಕೋಟ್ಟ ಬಳಿ ನಡೆದಿದೆ.

ಕೊಲ್ಲಂ ತೊಡಿಯೂರು ನಿವಾಸಿ ಅಂಜನ(24) ಮೃತಪಟ್ಟ ದುರ್ದೈವಿಯಾಗಿದ್ದಾಳೆ.

ಕಳೆದ ಸೋಮವಾರ ಅಂಜನಳಿಗೆ ಸ್ಥಳೀಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಉದ್ಯೋಗ ಲಭಿಸಿದ್ದು ಕರ್ತವ್ಯಕ್ಕೆ ಸೇರಿದ್ದಳು.

ಇಂದು ಬೆಳಗ್ಗೆ 10.30 ಕ್ಕೆ ಕರ್ತವ್ಯ ನಿಮಿತ್ತ ಸ್ಕೂಟರಿನಲ್ಲಿ ಪ್ರಯಾಣಿಸುವ ವೇಳೆ ಅಫಘಾತ ಸಂಭವಿಸಿದೆ.

10 ದಿನಗಳ ಹಿಂದೆಯಷ್ಟೆ ಅಂಜನಳ ಮದುವೆ ನಿಶ್ಚಿತಾರ್ಥ ನಡೆದಿದ್ದು ಅಕ್ಟೋಬರ್ 19 ರಂದು ಮದುವೆ ನಡೆಯ ಬೇಕಿತ್ತು.

Leave a Reply

Your email address will not be published. Required fields are marked *