ಮೂಡುಬಿದಿರೆಯಲ್ಲಿ ಕ್ರೈಸ್ತ ಬಾಂಧವರಿಂದ ಮೋಂತಿ ಫೆಸ್ತ್ ಆಚರಣೆ

ಮೂಡುಬಿದಿರೆ: ನಗರದ ಕೋರ್ಪುಸ್ ಕ್ರಿಸ್ತಿ ಚರ್ಚ್ ನಲ್ಲಿ ಇಂದು ಬೆಳಿಗ್ಗೆ ಈ ತೆನೆಹಬ್ಬವನ್ನು (ಮೊಂತಿ ಫೆಸ್ತ್) ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಮೂಡುಬಿದಿರೆ ಪೇಟೆಯ ಸಮಾಜಮಂದಿರ ವಾಣಿಜ್ಯ ಸಂಕೀರ್ಣ ಎದುರು ಮೂಡುಬಿದಿರೆ ಚರ್ಚ್ ನ ಧರ್ಮಗುರು ಒನಿಲ್ ಡಿ. ಸೋಜ ಅವರು ಪ್ರಾರ್ಥಿಸಿ ತೆನೆಗೆ ಪೂಜೆ ಸಲ್ಲಿಸಿದ ನಂತರ ಮುಖ್ಯ ರಸ್ತೆಯಲ್ಲಿ ಸಾಗಿ ಚರ್ಚ್ ವರೆಗೆ ತೆನೆಯನ್ನು ಮೆರವಣಿಗೆಯ ಮೂಲಕ ತಂದು ಚರ್ಚ್ ನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಕಾರ್ಯದರ್ಶಿ ನೋಬರ್ಟ್ ಮಾರ್ಟಿಸ್, ಪುರಸಭೆ ಸದಸ್ಯ ಜೊಸ್ಸಿ ಮೆನೇಜಸ್ ಸಹಿತ ನೂರಾರು ಕ್ರೈಸ್ತರು ಭಾಗವಹಿಸಿದರು.

Leave a Reply

Your email address will not be published. Required fields are marked *