Breaking
29 Jun 2026, Mon

ಮಣಿಪಾಲದಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ

ಮಣಿಪಾಲ: ಯುವಕನೊಬ್ಬ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಮಣಿಪಾಲದಲ್ಲಿ ನಡೆದಿದೆ.

ಮೃತ ಯುವಕನನ್ನು ಹರಿಕೇಶ್ (20) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ಹರಿಕೇಶ್ ಸ್ನೇಹಿತರಾದ ರಮೊನ್ ಜಾರ್ಜ್, ಯು.ಕೆ. ಅಶ್ವಿನಿ ಮತ್ತು ನೋಯಲ್ ಜೆ. ವರ್ಗೀಸ್ ಅವರೊಂದಿಗೆ ಅಪಾಟ್‌ರ್ಮೆಂಟ್‌ನಲ್ಲಿ ವಾಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಸೆ. 6ರಂದು ರಾತ್ರಿ ಹರಿಕೇಶ್ ತನ್ನ ಕೊಠಡಿಯ ಬಾಗಿಲು ತೆಗೆಯದೆ ಬಗ್ಗೆ ಮಾಹಿತಿ ಬಂದ ಮೇರೆಗೆ ವಸತಿಗೃಹದ ಮಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಬಾಗಿಲು ಒಡೆದು ನೋಡಿದಾಗ ಹರಿಕೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *