Breaking
22 Mar 2026, Sun

ಪಿಲಿಕುಳದ ಮುಂಭಾಗದಲ್ಲಿ ನಿಯಂತ್ರಣ ತಪ್ಪಿದ ಕಾರು: ಹಲವು ವಾಹನಗಳು ಹಾನಿ

ಮಂಗಳೂರು: ಹೊರವಲಯದ ಪಿಲಿಕುಳ ಹರ್ಬೇರಿಯಂ ಬೊಟಾನಿಕಲ್ ಮ್ಯೂಸಿಯಂ ಮುಂಭಾಗದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಕಾರು, 2 ಬೈಕ್, ಒಂದು ಸ್ಕೂಟರ್ ಹಾಗೂ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಸ್ಥಳೀಯ ನಿವಾಸಿ ವಿಶ್ವನಾಥ್ ಅವರಿಗೆ ಸೇರಿದ ಕಾರು ಇದಾಗಿದೆ. ಅಪಘಾತದಲ್ಲಿ ಕಾರು ಬೈಕ್ ಹಾಗೂ ಸ್ಕೂಟರ್ ಗೆ ಹಾನಿಯಾಗಿದೆ. ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕಾವೂರು ಠಾಣಾ ಪೊಲೀಸರು ಹಾಗೂ ಬೈಕಂಪಾಡಿ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *