Breaking
1 Oct 2026, Thu

ವಿದ್ವತ್ ‘ವಿಝ್ ವರ್ಲ್ಡ್’ ಕಾರ್ಯಕ್ರಮ: ಸಂವಹನ ಕೌಶಲದಿಂದ ಆತ್ಮವಿಶ್ವಾಸ ದ್ವಿಗುಣ

ಬೆಳ್ತಂಗಡಿ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ, ನಾಯಕತ್ವ ಗುಣ ಹಾಗೂ ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಗುರುವಾಯನಕೆರೆ ಶಕ್ತಿನಗರದ ವಿದ್ವತ್ ಪಿಯು ಕಾಲೇಜಿನಲ್ಲಿ ‘ವಿಝ್ ವರ್ಲ್ಡ್’ ನೇರ ದೂರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

‘ಇನ್‌ಸ್ಪೈರ್ ವಿದ್ವತ್’ ಪರಿಕಲ್ಪನೆಯಡಿ ಸೆ.28ರಂದು ನಡೆದ ಕಾರ್ಯಕ್ರಮವನ್ನು ವಿದ್ವತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಉದ್ಘಾಟಿಸಿದರು. ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಹಾಗೂ ಆತ್ಮವಿಶ್ವಾಸ ಸಂತಸ ತಂದಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಕೇವಲ ಪಠ್ಯಾಧಾರಿತ ಕಲಿಕೆಗೆ ಸೀಮಿತವಾಗದೆ, ಸಾರ್ವಜನಿಕವಾಗಿ ಹೇಗೆ ಪ್ರತಿಕ್ರಿಯಿಸಬೇಕು. ವಿಚಾರಗಳನ್ನು ಸ್ಪಷ್ಟವಾಗಿ ಯಾವ ರೂಪದಲ್ಲಿ ಪ್ರಸ್ತುತಪಡಿಸಬೇಕು, ಪ್ರಶ್ನೆಗಳನ್ನು ಕೇಳುವುದು, ತಕ್ಷಣದ ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುವುದು ಹಾಗೂ ತಂಡವಾಗಿ ಕಾರ್ಯನಿರ್ವಹಿಸುವಂತಹ ಕೌಶಲ್ಯವನ್ನು ಇದು ಬೆಳೆಸುತ್ತದೆ. ವಿದ್ಯಾರ್ಥಿಗಳ ಆತ್ಮವಿಶ್ವಾಸ ಹಾಗೂ ಶಿಕ್ಷಕರ ಪ್ರಯತ್ನವನ್ನು ಅಭಿನಂದಿಸಿದರು.

ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಈ ಮಂಡಗಳಲೆ ಮಾತನಾಡಿ, ವಿದ್ಯಾರ್ಥಿಗಳು ತರಗತಿ ಮಾತ್ರವಲ್ಲದೆ, ಅದಕ್ಕೂ ಆಚೆಗಿನ ಸ್ಪರ್ಧಾತ್ಮಕ ಜಗತ್ತಿಗೆ ತಮ್ಮ ಪ್ರತಿಭೆ ವಿಸ್ತರಿಸುವಲ್ಲಿ ದೂರದರ್ಶನದ ಜಗತ್ತನ್ನು ಇಲ್ಲಿ ಪರಿಚಯಿಸಿಲಾಗಿದೆ. ವರದಿಗಾರಿಕೆ, ಸುದ್ದಿ ಪ್ರಸಾರ, ಸಾಮಾಜಿಕ ವಿಚಾರಗಳೆಡೆಗಿನ ಅವರ ಜ್ಞಾನ ವಿಸ್ತರಿಸಲು ಇದೊಂದು ವೇದಿಕೆಯಾಗಿದೆ. ಜತೆಗೆ ಚರ್ಚೆಗಳು, ರಸಪ್ರಶ್ನೆಗಳು ಕೌಶಲ್ಯವನ್ನು ಬೆಳೆಸುತ್ತದೆ ಎಂದರು.

ತೀರ್ಪುಗಾರರಾಗಿ ಆಗಮಿಸಿದ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿ ಜಗನ್ನಾಥ ಮಾತನಾಡಿ, ತರಗತಿಯ ನಾಲ್ಕು ಗೋಡೆಗಳಾಚೆ ವಿದ್ಯಾರ್ಥಿಗಳಿಗೆ ನೈಜ ಮಾಧ್ಯಮ ಅನುಭವವನ್ನು ನೀಡುವ ವಿಶಿಷ್ಟ ಪರಿಕಲ್ಪನೆಯಾಗಿ ವಿಜ್ ವರ್ಲ್ಡ್ ಅನಾವರಣಗೊಂಡಿದೆ.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಟಿವಿ ನಿರೂಪಕರು, ವರದಿಗಾರರು, ಸಂದರ್ಶಕರು ಹಾಗೂ ಚರ್ಚಾ ಕಾರ್ಯಕ್ರಮದ ಪ್ಯಾನೆಲಿಸ್ಟ್‌ ಗಳು ಅನುಭವಿ ತಜ್ಞರಂತೆ ಕಂಡುಬಂದಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದಕ್ಕಾಗಿ ಸಂಸ್ಥೆಗೆ ಧನ್ಯವಾದ ಸಲ್ಲಿಸಿದರು.

ಮತ್ತೋರ್ವ ತೀರ್ಪುಗಾರ, ವೃತ್ತಿ ಮತ್ತು ಜೀವನ ಮಾರ್ಗದರ್ಶನ ತಜ್ಞ ವಿಕ್ರಮ್ ನಾಯಕ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕೇವಲ ಪಠ್ಯಾಧಾರಿತ ಕಲಿಕೆಗೆ ಸೀಮಿತವಾಗದೆ, ಸಾರ್ವಜನಿಕವಾಗಿ ತೊಡಗಿಸಿಕೊಳ್ಳುವ ಅತ್ಯುತ್ತಮ ಸ್ಪರ್ಧೆಯನ್ನು ವಿದ್ವತ್ ಕಾಲೇಜು ಪ್ರದರ್ಶಿಸಿದೆ. ಇಂತಹಾ ಅವಕಾಶಗಳನ್ನು ಸದ್ಭಳಸಿಕೊಳ್ಳಿ ಎಂದು ಶುಭ ಹಾರೈಸಿದರು.

ವಿದ್ವತ್ ಕಾಲೇಜಿನ ಪಿ.ಆರ್.ಒ. ಚೈತ್ರೇಶ್ ಸಿ.ಇಳಂತಿಲ ಮಾತನಾಡಿ, ಸಾಮಾಜಿಕ ವಿಚಾರಗಳೆಡೆಗೆ ವಿದ್ಯಾರ್ಥಿ ದಿಸೆಯಲ್ಲೆ ಜ್ಞಾನ ಬೆಳೆಸಿಕೊಳ್ಳುವುದು ಅಗತ್ಯ. ವಿಜ್ ವರ್ಲ್ಡ್, ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಸೂಕ್ತ ವೇದಿಕೆ ಒದಗಿಸುವ ಪ್ರಯತ್ನ ವಿದ್ವತ್ ಮಾಡಿದೆ. ಆತ್ಮವಿಶ್ವಾಸ ಮತ್ತು ಸೃಜನಶೀಲತೆಯ ಸಂಗಮವಾಗಿರುವ ಈ ವೇದಿಕೆ, ವಿದ್ಯಾರ್ಥಿಗಳು ತಮ್ಮದೇ ಧ್ವನಿಯ ಶಕ್ತಿಯನ್ನು ಅರಿತುಕೊಂಡು ನಾಯಕತ್ವದತ್ತ ಹೆಜ್ಜೆ ಇಡುವಂತೆ ಪ್ರೇರೇಪಿಸಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ವತ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪ್ರಜ್ವಲ್ ರೈ, ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ಪ್ರಾಂಶುಪಾಲರಾದ ಬಾಲಕೃಷ್ಣ ನಾಯಕ್, ಖಜಾಂಚಿ ಕಾಶೀನಾಥ ಎಂ.ಕೆ., ಟ್ರಸ್ಟಿಗಳಾದ ರೇಷ್ಮಾ ಸುಭಾಶ್ಚಂದ್ರ ಶೆಟ್ಟಿ, ಸಾತ್ವಿಕ್ ಶೆಟ್ಟಿ, ಪ್ರಾಂಶುಪಾಲರಾದ ಬಾಲಕೃಷ್ಣ ನಾಯಕ್ ಹಾಗೂ ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಆಂಗ್ಲವಿಭಾಗ ಉಪನ್ಯಾಸಕರಾದ ವಿನಯ ಕುಮಾರ್ ಕೆ. ನಿರ್ವಹಿಸಿದರು.

ಉತ್ತಮ ತಂಡಕ್ಕೆ ಪ್ರಶಸ್ತಿ ಕಾರ್ಯಕ್ರಮದಲ್ಲಿ ವಿದ್ವತ್ ಪ್ರೈಮ್, ವಾಯ್ಸ್ ಆಫ್ ಇಂಡಿಯಾ, ವಿದ್ವತ್ ಸಾರಥಿ, ವಾಯ್ಸ್ ಆಫ್ ವಿದ್ವತ್ ಎಂಬ ನಾಲ್ಕು ತಂಡಗಳಾಗಿದ್ದವು. ವಾಯ್ಸ್ ಆಫ್ ಇಂಡಿಯಾ ಪ್ರಥಮ ಸ್ಥಾನ ಗಳಿಸಿದರೆ, ವಾಯ್ಸ್ ಆಫ್ ವಿದ್ವತ್ ದ್ವಿತೀಯ ಸ್ಥಾನಗಳಿಸಿತು. ಉತ್ತಮ ನಿರೂಪಕರಾಗಿ ಶ್ರವಣ್ ರೈ, ಸಿ.ಎ.ಫಾತಿಮಾ, ಬೆಸ್ಟ್ ಮಾಡರೇಟರ್ ಮೈಲಾರ್ ಚಿಲ್ಲಾಲ್, ಬೆಸ್ಟ್ ರಿಪೋರ್ಟರ್ ಫಾತಿಮಾ ಇಫಾ ಹಾಗೂ ಉತ್ತಮ ತಂತ್ರಜ್ಞಾನ ವಿಭಾಗದಲ್ಲಿ ವಾಯ್ಸ್ ಆಫ್ ಇಂಡಿಯಾ ತಂಡ ಪ್ರಥಮ ಸ್ಥಾನಗಳಿಸಿತು.

Leave a Reply

Your email address will not be published. Required fields are marked *