Breaking
1 Oct 2026, Thu

ಗುರುವಾಯನಕೆರೆ – ಶಕ್ತಿನಗರ – ವೇಣೂರು ರಸ್ತೆ ದುರಸ್ತಿಗೆ ಚಾಲನೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ – ಶಕ್ತಿನಗರ – ವೇಣೂರು ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆಯ ತುರ್ತು ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಈ ಬಾರಿಯ ಮಳೆಯಿಂದ ರಸ್ತೆ ಹಲವೆಡೆ ತೀವ್ರವಾಗಿ ಹಾನಿಗೊಳಗಾಗಿದ್ದು, ಡಾಂಬರು ಕಿತ್ತುಹೋಗಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದವು. ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದರು.

ಸಾರ್ವಜನಿಕರ ಸಮಸ್ಯೆಯನ್ನು ಮನಗಂಡು ₹25 ಲಕ್ಷ ಅನುದಾನ ಮೀಸಲಿಟ್ಟು ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದ್ದು, ಹಾನಿಗೊಳಗಾದ ರಸ್ತೆ ಭಾಗಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ.

ರಸ್ತೆ ದುರಸ್ತಿಗೆ ತುರ್ತಾಗಿ ಸ್ಪಂದಿಸಿ ಅನುದಾನ ಒದಗಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಸ್ಥಳೀಯ ಸಾರ್ವಜನಿಕರು ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *