Breaking
19 Sep 2026, Sat

ಉಡುಪಿ: ಸೂಚನಾ ಫಲಕಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ; 12 ಮಂದಿಗೆ ಗಾಯ, ಓರ್ವ ಮಹಿಳೆ ಗಂಭೀರ!

ಉಡುಪಿ: ಇಳಕಲ್‌ನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಪಕ್ಕದ ಟೋಲ್ ಗೇಟ್ ನ ಸೂಚನಾ ಫಲಕಕ್ಕೆ ಢಿಕ್ಕಿಯಾಗಿ 12 ಮಂದಿ ಗಾಯಗೊಂಡು, ಓವ೯ ಮಹಿಳೆಗೆ ಗಂಭೀರವಾಗಿ ಗಾಯವಾದ ಘಟನೆ ಸಾಸ್ತಾನ ಟೋಲ್ ಸಮೀಪ ಆ.24ರಂದು ಸಂಭವಿಸಿದೆ.

ಬೆಳಗ್ಗೆ 4.30 ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಟೋಲ್ ನಿಂದ 500 ಮೀಟರ್ ಹಿಂದಿದ್ದ ಸೂಚನಾ ಫಲಕಕ್ಕೆ ಬಸ್‌ ಢಿಕ್ಕಿಯಾಗಿದೆ.

ಅಪಘಾತ ಸಂಭವಿಸಿದಾಗ ಬಸ್‌ನಲ್ಲಿ 36 ಪ್ರಯಾಣಿಕರಿದ್ದು ಬಸ್ಸಿನ ಚಾಲಕ ಮತ್ತು ನಿರ್ವಾಹಕ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಗಾಯಾಳುಗಳನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *