Breaking
22 Mar 2026, Sun

ಬಂಟ್ವಾಳದಲ್ಲಿ ಬಿಜೆಪಿ ಬಿ.ಮೂಡ ಶಕ್ತಿಕೇಂದ್ರದ ಅಭ್ಯಾಸ ವರ್ಗ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಿ.ಮೂಡ ಶಕ್ತಿಕೇಂದ್ರದ ಅಭ್ಯಾಸ ವರ್ಗವು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆ.24 ರಂದು ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತರದ ಗೋಪಾಲ್ ಸುವರ್ಣ, ರಮೇಶ್ ಶೆಣೈ, ಮಹಾಬಲ ಶೆಟ್ಟಿ, ಪ್ರಭಾಕರ್ ಪ್ರಭು , ಶ್ರೀಕಾಂತ್ ಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸುಲೋಚನಾ ಜಿ ಕೆ ಭಟ್ , ಪೂಜಾ ಪೈ , ಯತೀಶ್ ಅರ್ವರ್ ರವರು ಪ್ರಶಿಕ್ಷಣ ವರ್ಗದ ಅವಧಿಗಳನ್ನು ನಡೆಸಿಕೊಟ್ಟರು. ಸಂದೇಶ್ ಶೆಟ್ಟಿ ಅರೆಬೆಟ್ಟು ಇವರು ಸಮಾರೋಪ ನಡೆಸಿಕೊಟ್ಟರು, ಪ್ರಮುಖರಾದ ದಿನೇಶ್ ಭಂಡಾರಿ, ಗೋವಿಂದ ಪ್ರಭು, ಸುರೇಶ್ ಕುಲಾಲ್ ಬಂಟ್ವಾಳ,ಸುರೇಶ್ ಕುಮಾರ್ ಕೈಕಂಬ, ಹರಿಪ್ರಸಾದ್ ಭಂಡಾರಿಬೆಟ್ಟು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *