ಮೈಸೂರು: PGRSS ನಿರಾಶ್ರಿತರು ಮತ್ತು ವೃದ್ಧರ ಬೃಂದಾವನಕ್ಕೆ BEML ನಿವೃತ್ತ ನೌಕರ, ನಿರ್ದೇಶಕ ಹಾಗೂ ನಟ ಜಯಚಂದ್ರ ಅವರು ಭೇಟಿ ನೀಡಿ ಆಶ್ರಮದ ತಾಯಂದಿರ ಆರೋಗ್ಯ ವಿಚಾರಿಸಿ, ಅಕ್ಕಿಯನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಯಚಂದ್ರ ಅವರು, ತಾಯಂದಿರನ್ನು ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸಂಸ್ಥೆ ನಡೆಸುತ್ತಿರುವ ಸೇವಾ ಕಾರ್ಯವನ್ನು ಕಂಡು ಸಂತೋಷವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿಯೂ ತಮ್ಮಿಂದ ಸಾಧ್ಯವಾದ ಸಹಾಯ ನೀಡುವುದಾಗಿ ಭರವಸೆ ನೀಡಿದರು.
ಜಯಚಂದ್ರ ಅವರ ಸೇವಾ ಕಾರ್ಯಕ್ಕೆ PGRSS ಸಂಸ್ಥೆಯ ಪರವಾಗಿ ಹಾಗೂ ಆಶ್ರಮದ ನಿವಾಸಿಗಳು ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥ ಹಾಗೂ ಅಧ್ಯಕ್ಷ ಯಾದವ್ ಹರೀಶ್, ರಾಜ್ಯ ಸಹ ಕಾರ್ಯದರ್ಶಿ ರಕ್ತದಾನಿ ಮಂಜು, ಜಯಚಂದ್ರ ಹಾಗೂ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.


