Breaking
21 Jun 2026, Sun

ಸುರತ್ಕಲ್:‌ ‘ವಫಾʼ ಲಕ್ಕಿ ಸ್ಕೀಮ್ ನಲ್ಲಿ ವಂಚನೆ: ಗ್ರಾಹಕರಿಂದ ಹಣ ಪಡೆದು ದುಬೈಗೆ ಹಾರಿದ ಅಬ್ದುಲ್ ವಹಾಬ್

ಮಂಗಳೂರು: ವಫಾ ಹೆಸರಿನಲ್ಲಿ ಲಕ್ಕಿ ಸ್ಕೀಮ್ ನಡೆಸುತ್ತಿದ್ದ ಅಬ್ದುಲ್ ವಹಾಬ್ ಕುಳಾಯಿ ಎಂಬಾತ ಗ್ರಾಹಕರಿಗೆ ವಂಚಿಸಿ ಊರು ಬಿಟ್ಟು ದುಬೈಗೆ ಹಾರಿದ್ದು ಇದರಿಂದ ಆಕ್ರೋಶಗೊಂಡ ಗ್ರಾಹಕರು ಸುರತ್ಕಲ್‌ ನ ಗೋಲ್ಡ್ ಅಂಡ್ ಡೈಮಂಡ್ಸ್ ಕಚೇರಿಗೆ ನುಗ್ಗಿ ರಂಪ ನಡೆಸಿದ್ದಾರೆ.

ಈ ಲಕ್ಕಿ ಸ್ಕೀಮ್ ಯೋಜನೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನರಿದ್ದು ಅವರಿಂದ ಪಡೆದ ಹಣದಲ್ಲಿ ವಂಚಕ ಅಬ್ದುಲ್ ವಹಾಬ್ ಕುಳಾಯಿ ಸುರತ್ಕಲ್, ಬಿಜೈ ಕಾಪು, ಕೃಷ್ಣಾಪುರದಲ್ಲಿ ವಫಾ ಫರ್ನಿಚರ್, ಇಲೆಕ್ಟ್ರಾನಿಕ್ಸ್ ಶಾಪ್, ಗೋಲ್ಡ್ ಅಂಡ್ ಡೈಮಂಡ್ಸ್ ಹೀಗೆ ಬೇರೆ ಬೇರೆ ಹೆಸರಿನ ಉದ್ಯಮ ನಡೆಸುತ್ತಿದ್ದ.

ಈ ಸ್ಕೀಮ್‌ ನಲ್ಲಿ ಗ್ರಾಹಕರಿಂದ ತಿಂಗಳಿಗೆ ಒಂದು ಸಾವಿರದಂತೆ ಹಣ ಪಡೆದು ಪ್ರತಿ ತಿಂಗಳು ಡ್ರಾದಲ್ಲಿ ದುಬಾರಿ ಫ್ಲಾಟ್, ಕಾರು ಕೊಡಿಸುವುದಾಗಿ ನಂಬಿಸಿ ಈಗ ಜನರನ್ನು ಯಾಮಾರಿಸಿ ತಲೆಮರೆಸಿಕೊಂಡಿದ್ದಾನೆ. ಕಳೆದ ಮೂರು ವರ್ಷದಲ್ಲಿ 5 ಸೀಸನ್ ಲಕ್ಕಿ ಸ್ಕೀಮ್ ನಡೆಸಿದ್ದಾನೆ ಎನ್ನಲಾಗಿದೆ.

ಅಬ್ದುಲ್ ವಹಾಬ್ ದುಬೈ ಗೆ ಹಾರಿದ ಬಳಿಕ ವಿಡಿಯೋ ಮೂಲಕ ʼಜನರು ತಾಳ್ಮೆಯಲ್ಲಿರಿ, ನಮ್ಮದು ದುಬೈನಲ್ಲೂ ಬಿಸಿನೆಸ್ ಇದೆ, ಅದಕ್ಕಾಗಿ ಬಂದಿದ್ದೇನೆ, ಹಣ ಕೊಡುತ್ತೇವೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.

Leave a Reply

Your email address will not be published. Required fields are marked *