Breaking
7 May 2026, Thu

ಬಿಸಿ ರೋಡಿನ ಲಯನ್ಸ್‌ ಕ್ಲಬ್‌ ನಲ್ಲಿ ಸಾಮಾಜಿಕ ಭದ್ರತಾ ಯೋಜನೆ ಹಾಗೂ ಮಾದಕ ವ್ಯಸನಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

ಬಂಟ್ವಾಳ: ಪುರಸಭೆಯ ವತಿಯಿಂದ ಲಯನ್ಸ್‌ ಕ್ಲಬ್‌ ಬಿ.ಸಿ ರೋಡಿನಲ್ಲಿ ಬೀದಿ ಬದಿ ವ್ಯಾಪಾರಿಗಳು ಹಾಗೂ ಸ್ವ ಸಹಾಯ ಸಂಘದ ಸದಸ್ಯರಿಗೆ ಸ್ವ ನಿಧಿ ಸೇ ಸಮೃದ್ಧಿ ಯೋಜನೆಯಡಿ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಹಾಗೂ ಮಾದಕ ವ್ಯಸನಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ನಡೆಯಿತು.

ಪುರಸಭಾ ಅಧ್ಯಕ್ಷರಾದ ಶ್ರೀ ವಾಸು ಪೂಜಾರಿ ಲೊರೆಟ್ಟೊ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಸರಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪುರಸಭೆಯು ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸಹಕರಿಸುವಲ್ಲಿ ಪುರಸಭೆಯು ಬದ್ಧವಾಗಿದೆ ಎಂದರು.

ಪುರಸಭೆಯ ಮುಖ್ಯಾಧಿಕಾರಿಯಾದ ಮತ್ತಡಿ ಅವರು ಮಾತನಾಡಿ ಬೀದಿಬದಿ ವ್ಯಾಪಾರಿಗಳು ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಜಿಲ್ಲಾ ನಗರ ಅಭಿಯಾನ ವ್ಯವಸ್ಥಾಪಕಿಯಾದ ಐರಿನ್‌ ರೆಬೆಲ್ಲೋ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು ಪಿ.ಯಂ.ಸ್ವ ನಿಧಿ ಯೋಜನೆಯ ಪ್ರಯೋಜನ ಪಡೆದು ಸ್ವಯಂ ಉದ್ಯೋಗಿಗಳಾಗಬೇಕು ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಬ್ಯಾಂಕ್‌ ಲಿಂಕೇಜ್‌ ಮೂಲಕ ಸಾಲ ಪಡೆದು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆಯ ಮನೋ ವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ದಿವ್ಯ,ಎನ್ ಇವರು ಈಗಿನ ಯುವಕ/ಯುವತಿಯರು ಹಾಗು ವಿದ್ಯಾರ್ಥಿಗಳು ಮಾದಕ ವ್ಯಸನದ ದುಶ್ಚಟಕ್ಕೆ ಯಾವ ರೀತಿ ಬಲಿಯಾಗುತ್ತಾರೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಪೋಷಕರು ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಯೂನಿಯನ್‌ ಬ್ಯಾಂಕ್‌ ವ್ಯವಸ್ಥಾಪಕರಾದ ಸತೀಶ್‌ ಎಡ್ವಿನ್‌ ಸಾಮಾಜಿಕ ಭಧ್ರತಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎಸ್.ಬಿ.ಐ ಬ್ಯಾಂಕ್‌ ಸಿಬ್ಬಂದಿ ಜೀವನ್‌ , ಪುರಸಭಾ ಸದಸ್ಯರಾದ ಪುರುಷೋತ್ತಮ ,ಮೀನಾಕ್ಷಿ ನಾಮ ನಿರ್ದೇಶಿತ ಸದಸ್ಯರಾದ ಜಗದೀಶ್‌ ಕುಂದರ್‌ ,ಲಯನ್ಸ್‌ ಕ್ಲಬ್‌ ನ ಅಧ್ಯಕ್ಷರಾದ ರೋಹಿತಾಶ್ವ ,ಪಟ್ಟಣ ಮಾರಾಟ ಸಮಿತಿಯ ಸದಸ್ಯರಾದ ಇಕ್ಬಾಲ್‌ ಹಾಗು ಸಮುದಾಯ ಸಂಘಟಕರಾದ ಶೀಮತಿ ಉಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿ ಆರ್.ಪಿ.ಗೀತಾ ಸ್ವಾಗತಿಸಿ ಸಂಧ್ಯಾ ಧನ್ಯವಾದವಿತ್ತರು .ಸಿ.ಆರ್‌ .ಪಿ . ಮಂಗಳ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *