ನೆಲ್ಯಾಡಿ: ಬೈಕ್ ನಲ್ಲಿ ಇಬ್ಬರು ಯುವಕರು ಬಂದು ರಸ್ತೆ ಬದಿ ನಿಂತಿದ್ದ ಅಲಿಮಮ್ಮ (65) ವೃದ್ದೆಯ ಕುತ್ತಿಗೆಯಿಂದ 10 ಪವನ್ ತೂಕದ ಸರವನ್ನು ಕದ್ದೊಯ್ದ ಘಟನೆ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಗ್ರಾಮದಲ್ಲಿ ನಡೆದಿದೆ.
ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ನೆಕ್ಕಿಲಾಡಿಯಲ್ಲಿ ಬಂಧಿಸಿ ಚಿನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಸುಳ್ಯದ ಅಲೆಟ್ಟಿ ನಿವಾಸಿ ಅಬ್ದುಲ್ ರಹಿಮಾನ್ (31) ಎಂದು ಗುರುತಿಸಲಾಗಿದೆ.

ಬೈಕ್ ನಲ್ಲಿ ಇಬ್ಬರು ಯುವಕರು ಬಂದು ವೃದ್ದೆಯನ್ನು ಮಾತನಾಡುವ ನೆಪದಲ್ಲಿ ಕುತ್ತಿಗೆಯಲ್ಲಿದ್ದ ಸರವನ್ನು ಕದ್ದೊಯ್ದಿದ್ದು ಪರಾರಿಯಾಗಿದ್ದರು. ನಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ತಂಡ ಕಾರ್ಯಾಚರಣೆ ನಡೆಸಿ ಅವರನ್ನು ನೆಕ್ಕಿಲಾಡಿಯಲ್ಲಿ ಪತ್ತೆ ಹಚ್ಚಿ ದರೋಡೆಗೆ ಬಳಸಿದ ಬೈಕ್ ಮತ್ತು ಅಂದಾಜು 4.54 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.




