ಬಂಟ್ವಾಳ: ಕೇರಳದ ಪೋಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿ ಕೇರಳ ಮೊಹಮ್ಮದ್ ರಾಝಿಕ್ ಎಂಬಾತನ ಕಾರು ಬಂಟ್ವಾಳದ ಮಂಚಿಯಲ್ಲಿ ಅಪಘಾತವಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.



ಈತನ ಕಾರು ಇನ್ನೊಂದು ಕೇರಳ ಮೂಲದ ಕಾರಿಗೆ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಆ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಆದರೆ ಆರೋಪಿ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದು, ಅದಾಗಲೆ ಪೊಲೀಸರು ಈತನನ್ನು ಸೆರೆಹಿಡಿದಿದ್ದಾರೆ.

ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಈತ ಹಳೆಯ ಆರೋಪಿ ಕೂಡ ಆಗಿದ್ದ ಎನ್ನಲಾಗಿದೆ. ಹಾಗಾಗಿ ಪೋಲೀಸರ ತಂಡ ಈತನ ಬಂಧನಕ್ಕೆ ಬಲೆ ಬೀಸಿತ್ತು.
ಆ.19ರಂದು ಮಧ್ಯಾಹ್ನ ಕಾರು ಬಂಟ್ವಾಳದ ಕಡೆ ಹೋಗುತ್ತಿರುವ ಖಚಿತ ಮಾಹಿತಿ ಪಡೆದ ಕೇರಳ ಪೊಲೀಸರ ತಂಡ ಈತನ ಬೆನ್ನ ಹಿಂದೆ ಬಿದ್ದಿದ್ದರು.




