ಬೆಂಗಳೂರು: ಎಕ್ಸ್ ಕ್ಯೂಸ್ಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹಿಟ್ ಪಡೆದಿದ್ದ ಸ್ಯಾಂಡಲ್ ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಅಂತ ಹೇಳಲಾಗುತ್ತಿದೆ.
ಈ ನಿಟ್ಟಿನಲ್ಲಿ ನಟ ಅಜಯ್ ವಿರುದ್ಧ ಅವರ ಪತ್ನಿ ಸಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಹ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಪ್ರೀತಿಸಿ ಮದುವೆಯಾಗಿದ್ದ ಅಜಯ್ ರಾವ್ ಮತ್ತು ಸ್ವಪ್ನಾ ರಾವ್ ದಂಪತಿ ತಮ್ಮ 11 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದು ಇವರಿಗೆ ಚರಿಷ್ಮಾ ಎಂಬ ಹೆಸರಿನ ಮಗಳಿದ್ದಾಳೆ.
ಎಕ್ಸ್ ಕ್ಯೂಸ್ಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹಿಟ್ ಪಡೆದಿದ್ದ ನಟ ಅಜಯ್ ರಾವ್ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಅವರ ನಿರ್ಮಾಣದಲ್ಲಿಯೇ ಯುದ್ದಕಾಂಡ ಚಿತ್ರ ಕೂಡ ರಿಲೀಸ್ ಆಗಿ, ತಕ್ಕ ಮಟ್ಟಿನ ಜನ ಮನ್ನಣೆ ಪಡೆದುಕೊಂಡಿತ್ತು.



