Breaking
19 Sep 2026, Sat

ಬಸ್ ನಲ್ಲಿ ಯುವತಿಯ ಮೈ ಮುಟ್ಟಿ ವೃದ್ಧನ ಅಸರ್ಭ್ಯ ವರ್ತನೆ: ಆರೋಪಿ ಪೊಲೀಸ್ ವಶಕ್ಕೆ

ಮೂಡುಬಿದಿರೆ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ವೃದ್ಧನೋರ್ವ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮೂಡುಬಿದಿರೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳುವಾಯಿ ಗ್ರಾಮದ ಕರಿಯನಂಗಡಿ ನಿವಾಸಿ ರೆಹ್ಮಾನ್(60) ಆರೋಪಿಯಾಗಿದ್ದಾನೆ.

ಈತ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಬದಿಯಲ್ಲಿ ನಿಂತಿದ್ದ ಯುವತಿಯನ್ನು ತನ್ನ ಕೈಗಳಿಂದ ಆಕೆಯ ತೊಡೆ, ಕಾಲುಗಳನ್ನು ಮುಟ್ಟುತ್ತಿದ್ದ.

ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ರು.

ಯಾವಾಗ ಈ ವಿಡಿಯೋ ವೈರಲ್ ಆಯ್ತೋ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವೀಡಿಯೋದಲ್ಲಿ ಯುವತಿಯ ಮುಖ ಚಹರೆ ಸರಿಯಾಗಿ ಕಾಣದೆ ಇರುವುದರಿಂದ ತೊಂದರೆಗೆ ಒಳಗಾದವರು ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ಮೂಡುಬಿದಿರೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *