Breaking
21 Mar 2026, Sat

ಶಿವಮೊಗ್ಗದಲ್ಲಿ ಖಾಸಗಿ ಶಾಲಾ ಬಸ್ ಪಲ್ಟಿ:ಓರ್ವ ವಿದ್ಯಾರ್ಥಿಗೆ ಗಾಯ, ಉಳಿದವರು ಪಾರು

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಶಾಲಾ ಬಸ್ ವೊಂದು ಪಲ್ಟಿಯಾಗಿ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್’ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾನುಗೋಡು ಗ್ರಾಮದ ಬಳಿ ಆಗಸ್ಟ್ 16 ರ ಬೆಳಗ್ಗಿನ ವೇಳೆ ನಡೆದಿದೆ.

ಗರ್ತಿಕೆರೆಯ ಖಾಸಗಿ ಶಾಲೆಯ ನರ್ಸರಿ ವಿಭಾಗದ ಒಟ್ಟು 12 ಮಂದಿ ಮಕ್ಕಳು ಈ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯವಾಗಿದೆ.

ಉಳಿದಂತೆ ಬಸ್ ನಲ್ಲಿದ್ದ ಎಲ್ಲ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *