Breaking
19 Sep 2026, Sat

ಮೈಸೂರು ಜಿಲ್ಲೆಯ ಬಿಳಿಕೆರೆ ಗ್ರಾಮದ ಪಿ ಜಿ ಆರ್ ಎಸ್ ಎಸ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೈಸೂರು : ಪಿ ಜಿ ಆರ್ ಎಸ್ ಎಸ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮೈಸೂರು ಜಿಲ್ಲೆ , ಹುಣಸೂರು ತಾಲೂಕು ಬಿಳಿಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಪಂಚಾಯತ್ ಗ್ರಾಮ ವೃದ್ಧಿ ಮತ್ತು ರೈತರ ಸೇವಾ ಸಮಿತಿಯ ಹಾಗೂ ಬಿಳಿಕೆರೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ನಾರಾಯಣ ಆಸ್ಪತ್ರೆ ಮತ್ತು ಅನ್ನಪೂರ್ಣ ಆಸ್ಪತ್ರೆ ಪತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ರಾಜ್ಯಾಧ್ಯಕ್ಷರಾದ ಯಾದವ್ ಹರೀಶ್ ಹಾಗೂ ಬಿಳಿಕೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಪಿ ಡಿ ಓ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಬಿಳಿಕೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಮರತಾಯಮ್ಮರವರು ಮತ್ತು ಹುಣಸೂರು ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ರಾಜೇಂದ್ರ ಕೆ ಎಲ್, ಪಿ ಡಿ ಓ ಎಚ್ ಎನ್ ಮಹಾದೇವಸ್ವಾಮಿ, ಪಂಚಾಯತ್ ಗ್ರಾಮಾವೃದ್ಧಿ ರಾಜ್ಯಾಧ್ಯಕ್ಷರಾದ ಯಾದವ್ ಹರೀಶ್ ಖಜಾಂಜಿ, ಮಂಜುಳಾ ಎಸ್, ಸಹ ಕಾರ್ಯದರ್ಶಿಯಾದ ಪಲ್ಲವಿ ಎಚ್ , ಸಂಚಾಲಕರಾದ ರಕ್ತದಾನಿ ಮಂಜು, ಹರಿಣಿ , ನಾರಾಯಣ ಆಸ್ಪತ್ರೆಯ ವೈದ್ಯರಾದ ಗುಲ್ಜಾರ್, ಆಸ್ಪತ್ರೆ ಸಿಬ್ಬಂದಿಗಳು , ಕಣ್ಣಿನ ಆಸ್ಪತ್ರೆಯ ವೈದ್ಯರಾದ ಉದಯ್ , ಸಿಬ್ಬಂದಿಗಳು ಬಿಳಿಕೆರೆ ಗ್ರಾಮದ ಎಲ್ಲಾ ಹಿರಿಯ ನಾಗರಿಕರು ಮಹಿಳೆಯರು ಯುವಕ ಯುವತಿಯರು ಕಾರ್ಯಕ್ರಮಕ್ಕೆ ಭಾಗವಹಿಸಿದರು. 500ಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Leave a Reply

Your email address will not be published. Required fields are marked *