Breaking
13 May 2026, Wed

ಶ್ರೀ ಶಾರದಾ ಭಜನಾ ಮಂದಿರ ವೀರಕಂಭದಲ್ಲಿ 21 ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ

ಕಲ್ಲಡ್ಕ : ಶ್ರೀ ರಾಮ ವಿದ್ಯಾ ಕೇಂದ್ರ ಕಲ್ಲಡ್ಕ, ಶ್ರೀ ಶಾರದಾ ಭಜನಾ ಮಂದಿರ ವೀರಕಂಭ ಹಾಗೂ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ವೀರಕಂಭ ವತಿಯಿಂದ 21 ನೇ ವರ್ಷದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ಶ್ರೀ ಶಾರದಾ ಭಜನಾ ಮಂದಿರ ವೀರಕಂಭದಲ್ಲಿ ಜರಗಿತು

ಈ ಕಾರ್ಯಕ್ರಮಕ್ಕೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಆಗಮಿಸಿ ಶುಭ ಹಾರೈಸಿದರು

ಕಲ್ಲಡ್ಕ ಶ್ರೀರಾಮ ಪ್ರೌಢಶಾಲಾ ಶಿಕ್ಷಕಿ ಸೌಮ್ಯ ಮಾತಾಜಿ ವರಮಹಾಲಕ್ಷ್ಮಿ ಪೂಜಾ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಪೂಜ ಸಮಿತಿಯ ಅಧ್ಯಕ್ಷ ಸೌಮ್ಯ ವೇಣುಗೋಪಾಲ್ ಉಪಸ್ಥಿತರಿದ್ದರು. ವೇದ, ಜಯಂತಿ, ಪೂಜಾ, ಪ್ರಾರ್ಥಿಸಿ, ಪೂಜಾ ಸ್ವಾಗತಿಸಿ, ಕುಸುಮ ಶೆಟ್ಟಿ ವಂದಿಸಿದರು, ಪ್ರೇಮ ನಾಗೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *