ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್(ರಿ) ಬಂಟ್ವಾಳ ಇದರ ವತಿಯಿಂದ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮವು ಕೊಡ್ಮನ್ ಶಾಲೆಯಲ್ಲಿ ಆ.07ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರೇಮ ವಹಿಸಿದ್ದರು. ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿ ಕೃಷಿ ಮೇಲ್ವಿಚಾರಕರಾದ ಭಾಸ್ಕರ್ ರವರು ಪರಿಸರದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಒಕ್ಕೂಟ ಅಧ್ಯಕ್ಷ ಉಮೇಶ್ ಆಳ್ವ, SDMC ಅಧ್ಯಕ್ಷೆ ಶ್ರೀಮತಿ ಮಾಧವಿ ಶೆಟ್ಟಿ, ಉಪಾಧ್ಯಕ್ಷರು ಅಶೋಕ್ ಶೆಟ್ಟಿ ಹಾಗೂ ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ವೇಳೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಗಣ್ಯರು, ಮಕ್ಕಳು, ಶಿಕ್ಷಕರು ಹಾಗೂ ಸದಸ್ಯರು ಸೇರಿ ಗಿಡ ನಾಟಿ ಮಾಡಿದರು.
ವಲಯ ಮೇಲ್ವಿಚಾರಕರಾದ ರೂಪ ರೈ ಕಾರ್ಯಕ್ರಮ ನಿರೂಪಣೆ ಮಾಡಿದರು. ಮೇರಮಜಲು ಸೇವಾಪ್ರತಿನಿಧಿ ಶೋಭಾರವರು ಸ್ವಾಗತಿಸಿದರು. ಕೊಡ್ಮನ್ ಸೇವಾಪ್ರತಿನಿಧಿ ಶೈಲಜಾ ವಂದಿಸಿದರು.



