Breaking
19 Sep 2026, Sat

ಎಸ್.ಐ.ಟಿ.ಯ ಇಂದಿನ ತನಿಖೆ ತಟಸ್ಥ: ಕಚೇರಿಯಲ್ಲಿರುವ ಎಸ್ಐಟಿ ಅಧಿಕಾರಿಗಳು

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಮುಸುಕುದಾರಿ ದೂರುದಾರ ವ್ಯಕ್ತಿ ಸೂಚಿಸಿದ 13ನೇ ಸ್ಥಳದಲ್ಲಿ ಕಳೇಬರಕ್ಕಾಗಿ ನಡೆಯಬೇಕಿದ್ದ ಶೋಧ ಕಾರ್ಯಾಚರಣೆ ಇಂದು ನಡೆದಿಲ್ಲ ಎಂದು ತಿಳಿದು ಬಂದಿದೆ.

ಪಾಂಗಾಳದಲ್ಲಿ ಬುಧವಾರ ರಾತ್ರಿ ನಡೆದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಎಸ್.ಐ.ಟಿ. ಅಧಿಕಾರಿಗಳು ಸಹಿತ ಎಸಿ, ತಹಶೀಲ್ದಾರ್ ಸಮೇತ ಎಲ್ಲ ಅಧಿಕಾರಿಗಳು ಇಂದು ಕಾರ್ಯಾಚರಣೆ ನಡೆಸದೆ ತಟಸ್ಥ ನಿಲುವು ತೋರಿದ್ದಾರೆ ಅಂತ ಹೇಳಲಾಗುತ್ತಿದೆ.

ಮಾತ್ರವಲ್ಲ ಎಲ್ಲಾ ಅಧಿಕಾರಿಗಳು ಬೆಳ್ತಂಗಡಿ ಎಸ್.ಐ.ಟಿ. ಕಚೇರಿಯಲ್ಲಿ ಟಿಕಾಣಿ ಹೂಡಿ ಸಭೆ ನಡೆಸಿದ್ದಾರೆ ಅನ್ನುವ ಮಾಹಿತಿಗಳು ಕೆಲವು ಮೂಲಗಳಿಂದ ಲಭ್ಯವಾಗಿದೆ.

ಇತ್ತ ಅನಾಮಿಕ ವ್ಯಕ್ತಿ ಕೂಡ ಎಸ್.ಐ.ಟಿ. ಕಚೇರಿಗೆ ಬಂದು ಬಳಿಕ ತಮ್ಮ ಪರ ನ್ಯಾಯವಾದಿಗಳೊಂದಿಗೆ ಹಿಂದಿರುಗಿದ್ದಾರೆ.

ಅಧಿಕಾರಿಗಳ ಮುಂದಿನ ಕಾರ್ಯತಂತ್ರ ನಿಗೂಢವಾಗಿದ್ದು,ಪ್ರಕರಣ ಎತ್ತ ಸಾಗಬಹುದು ಅನ್ನುವ ಕುತೂಹಲ ಸಾರ್ವಜನಿಕ ವಲಯದಲ್ಲಿ ಮೂಡಿದೆ.

Leave a Reply

Your email address will not be published. Required fields are marked *