ಬಂಟ್ವಾಳ: ಗೆಳೆಯರ ಬಳಗ ಮಾವಿನಕಟ್ಟೆ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಮಹಿಳಾ ಸಂಘ ಮಾವಿನಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 29ನೇ ವರ್ಷದ ಮೊಸರು ಕುಡಿಕೆ ಉತ್ಸವ ಆ. 16 ರಂದು ಬೆಳಿಗ್ಗೆ 9 ಗಂಟೆಗೆ ಸಾರ್ವಜನಿಕ ಕೇಂದ್ರ ಮೈದಾನ ಮಾವಿನಕಟ್ಟೆಯಲ್ಲಿ ನೆರವೇರಲಿದೆ.

ಈ ಕಾರ್ಯಕ್ರಮವನ್ನು ಮಾವಿನಕಟ್ಟೆ ಚಾಮುಂಡೇಶ್ವರೀ ದೇವಸ್ಥಾನ ಅರ್ಚಕರು ಜಗದೀಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ವನಿತಾ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶೇಖರ ಶೆಟ್ಟಿ ಬದ್ಯಾರು, ವಾಮದಪದವು ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷರು ಸಂಜೀವ ಪೂಜಾರಿ ಪಿಲಿಂಗಾಲು, ಚೆನ್ನೈತ್ತೋಡಿ ಪಂ. ಅ. ಅಧಿಕಾರಿ ಜೋಯಲ್ ಪ್ರಶಾಂತ ಫಲ್ಲೇರೋ, ಇರ್ವತ್ತೂರು ಪಂ. ಆ. ಅಧಿಕಾರಿ ನಿಶಾಂತ್ ಬಿ. ಆರ್ ಉಪಸ್ಥಿತರಿರುವರು.
ಕಾರ್ಯಕ್ರಮದ ಅಂಗವಾಗಿ ಶ್ರೀ ಚಾಮುಂಡೇಶ್ವರೀ ಭಜನಾ ಮಂಡಳಿ ಮಾವಿನಕಟ್ಟೆ ಇವರಿಂದ ಕುಣಿತ ಭಜನೆ, ಬೆಳಿಗ್ಗೆ 10 ಗಂಟೆಗೆ ಮುಕ್ತ ವಾಲಿಬಾಲ್ ಪಂದ್ಯಾಟ ಹಾಗೂ ಸ್ಥಳೀಯ ತಂಡಗಳ ವಾಲಿಬಾಲ್ ಪಂದ್ಯಾಟ ನಡೆಯಲ್ಲಿದ್ದು, 3 ಗಂಟೆಗೆ ಮುದ್ದು ಕೃಷ್ಣ ಸ್ಪರ್ಧೆ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಇದರ ಜೊತೆಗೆ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಂಜೆ ಉಪಾಹಾರದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪದಾಧಿಕಾರಿಗಳು ಹಾಗೂ ಸಮಿತಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



