ಸಿದ್ಧಕಟ್ಟೆ: ಕೊಳೆರೋಗ ಭಾದೆಯಿಂದ ನಷ್ಟಕೀಡಾದ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡುವಂತೆ ಕರ್ನಾಟಕ ಸರಕಾರ ಮಾನ್ಯ ತೋಟಗಾರಿಕೆ ಸಚಿವರಿಗೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಅದ್ಯಕ್ಷರು ಪ್ರಭಾಕರ ಪ್ರಭು ಮನವಿಯನ್ನು ಮಾಡಿದ್ದಾರೆ.

ಈ ಮನವಿಯಲ್ಲಿ ಅವಿಭಜಿತ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ಬಹುತೇಕ ಆರ್ಥಿಕ ವ್ಯವಹಾರಗಳು ಅಡಿಕೆ ಬೆಳೆಗಾರರನ್ನು ಅವಲಂಬಿತಗೊಂಡಿದ್ದು ಪ್ರಸ್ತುತ ವರ್ಷ ಅವಧಿಗೆ ಮುನ್ನವೇ ಮತ್ತು ನಿರಂತರವಾಗಿ ಬಂದಿರುವ ಭಾರೀ ಮಳೆಯ ಪರಿಣಾಮವಾಗಿ ಅಡಿಕೆ ಬೆಳೆಗೆ ವ್ಯಾಪಕವಾಗಿ ಕೊಳೆರೋಗ ಭಾದಿಸಿದ್ದು ಶೇ 50 ರಷ್ಟು ಹಸಿ ಅಡಿಕೆಗಳು ಮರದ ಬುಡದಲ್ಲಿ ಬಿದ್ದಿದ್ದು ಇದರಿಂದ ಅಡಿಕೆ ಬೆಳೆಯುವ ರೈತರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದು, ಮುಂದಿನ ವರ್ಷದ ಜೀವನಕ್ಕೆ ಭಾರೀ ಹೊಡೆತ ಬೀಳಲಿದ್ದು , ಕೊಳೆರೋಗ ತಡೆಯುವುದ್ದಕ್ಕಾಗಿ ಮದ್ದು ಸಿಂಪಡಿಸಲು ಮಳೆಯ ಕಾಟದಿಂದ ಸಾಧ್ಯವಾಗುತ್ತಿಲ್ಲ . ಇದರಿಂದ ಅಡಿಕೆ ಮರಗಳಿಗೂ ಸಹ ರೋಗದ ಭಾದೆಯಿಂದಾಗಿ ಅಡಿಕೆ ಮರಗಳಿಗೂ ತೊಂದರೆಯಾಗುತ್ತಿದ್ದು ,ಮರಗಳು ಕ್ಷೀಣಿಸತೊಡಗಿವೆ . ಒಟ್ಟಿನಲ್ಲಿ ಅವಿಭಜಿತ ಕರಾವಳಿ ಜಿಲ್ಲೆಯಲ್ಲಿ ಅಡಿಕೆ ಬೆಳೆಯುವ ರೈತರ ಪರಿಸ್ಥಿತಿ ಕಂಗಲಾಗಿರುತ್ತದೆ.

ಈ ಹಿನ್ನಲೆಯಲ್ಲಿ ಪ್ರತಿ ಒಂದು ಎಕ್ರೆ ಅಡಿಕೆ ಬೆಳೆಗೆ ರೂ 75,000 /-ದಂತೆ ಪರಿಹಾರ ಘೋಷಣೆ ಮಾಡಬೇಕು ಅಥವಾ ರೈತರು ಪಡಿದಿರುವ ಬೆಳೆಸಾಲವನ್ನು ಮನ್ನಾ ಮಾಡಬೇಕು ಎಂದು ಈ ಮೂಲಕ ವಿನಂತಿಸಿಕೊಂಡಿದ್ದಾರೆ.
- ಪ್ರಧಾನ ಕಾರ್ಯದರ್ಶಿಗಳು ,ತೋಟಗಾರಿಕೆ ಇಲಾಖೆ , ಕರ್ನಾಟಕ ಸರಕಾರ (ಅಗತ್ಯ ಕ್ರಮಕ್ಕಾಗಿ ಮನವಿ)



